7
ಹೊಸ ಅತಿಥಿಗಳ ಆಗಮನದ ನಿರೀಕ್ಷೆಯಲ್ಲಿ ಬೈಕುಲಾ ಮೃಗಾಲಯ

ಮುಂಬೈನಲ್ಲಿ ಜನಿಸಲಿದೆ ದೇಶದ ಮೊದಲ ಪೆಂಗ್ವಿನ್‌

Published:
Updated:
ಮುಂಬೈ ಮೃಗಾಲಯದಲ್ಲಿರುವ ಪೆಂಗ್ವಿನ್‌ಗಳ ಆರೈಕೆಯಲ್ಲಿ ತೊಡಗಿರುವ ನೌಕರ ಪ್ರಜಾವಾಣಿ ಚಿತ್ರ 

ಮುಂಬೈ: ಪಕ್ಷಿ ಪ್ರಿಯರಿಗೊಂದು ಸಂತಸದ ಸುದ್ದಿ. ಎಲ್ಲವೂ ಅಂದುಕೊಂಡಂತೆ ನಡೆದರೆ, ಭಾರತದ ಮೊದಲ ಪೆಂಗ್ವಿನ್‌ (ಹಂಬೋಲ್ಟ್ ಪೆಂಗ್ವಿನ್) ಮುಂಬೈನ ಬೈಕುಲ್ಲಾ ಮೃಗಾಲಯದಲ್ಲಿ ಜನಿಸಲಿದೆ.

ಎಂಟು ಪೆಂಗ್ವಿನ್‌ಗಳನ್ನು ದಕ್ಷಿಣ ಕೊರಿಯಾದಿಂದ 2016ರ ಜುಲೈ 26ರಂದು ಇಲ್ಲಿಗೆ ತರಲಾಗಿತ್ತು. ಇವುಗಳಲ್ಲಿ ಒಂದು ಗಂಡು ಮರಿ ಮೂರೇ ತಿಂಗಳಿನಲ್ಲಿ ಅನಾರೋಗ್ಯದಿಂದ ಮೃತಪಟ್ಟಿತ್ತು.

ಇದೀಗ ಮಿಸ್ಟರ್ ಮೋಲ್ಟ್‌ ಮತ್ತು ಫ್ಲಿಪ್ಪರ್‌ ಹೆಸರಿನ ಜೋಡಿ ಕಟ್ಟಿರುವ ಗೂಡಿನಲ್ಲಿ ಮೊಟ್ಟೆ ಇರುವುದು ಗುರುವಾರ ಗಮನಕ್ಕೆ ಬಂದಿದೆ. ಈ ಮೊಟ್ಟೆಯಿಂದ 40 ದಿನಗಳಲ್ಲಿ ಮರಿ ಹೊರಬರಲಿದೆ. ಸದ್ಯ ಇಲ್ಲಿರುವ ಪೆಂ‌ಗ್ವಿನ್‌ಗಳ ‍ಪೈಕಿ ಮೋಲ್ಟ್‌ ಕಿರಿಯ ಗಂಡು ಮತ್ತು ಫ್ಲಿಪ್ಪರ್‌ ಹಿರಿಯ ಹೆಣ್ಣು.

ಹಂಬೋಲ್ಟ್‌ ‍‍ಪೆಂಗ್ವಿನ್‌ಗಳನ್ನು ಚಿಲಿ ಪೆಂಗ್ವಿನ್‌ಗಳೆಂದು ಸಹ ಕರೆಯುತ್ತಾರೆ. ಇವು ಚಿಲಿ ಮತ್ತು ಪೆರುವಿನ ಕರಾವಳಿ ತೀರದಲ್ಲಿ ಕಾಣಸಿಗುತ್ತವೆ. ಇವುಗಳ ಸಮೀಪದ ಬಂಧುಗಳು ಆಫ್ರಿಕನ್‌ ಪೆಂಗ್ವಿನ್‌ಗಳು.

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !