ಮೇಘಾಲಯ ಗಣಿ ಅವಘಡ: ಮೃತದೇಹ ಪತ್ತೆ

7

ಮೇಘಾಲಯ ಗಣಿ ಅವಘಡ: ಮೃತದೇಹ ಪತ್ತೆ

Published:
Updated:

ಗುವಾಹಟಿ: ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತಿದ್ದ ಸುರಂಗದಲ್ಲಿ 34 ದಿನಗಳ ಹಿಂದೆ ಸಿಲುಕಿದ್ದ 15 ಕಾರ್ಮಿಕರಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿದೆ.

ದೂರದಿಂದಲೇ ನಿಯಂತ್ರಿಸಬಹುದಾದ ವಾಹನಗಳನ್ನು (ಆರ್‌ಒವಿ) ಬಳಸಿ ಮೃತದೇಹವನ್ನು ಪತ್ತೆಹಚ್ಚಲಾಗಿದೆ.

‘ಭೂಮಿಯಿಂದ 160 ಅಡಿ ಆಳದಲ್ಲಿದ್ದ ಮೃತದೇಹವನ್ನು ನೌಕಾಪಡೆ ಸಿಬ್ಬಂದಿ ಹೊರತೆಗೆದಿದ್ದಾರೆ’ ಎಂದು ನೌಕಾಪಡೆ ವಕ್ತಾರರು ತಿಳಿಸಿದ್ದಾರೆ.

ಡಿಸೆಂಬರ್‌ 13ರಂದು ಮೇಘಾಲಯದ ಪೂರ್ವ ಜೈಂತಿಯಾ ಹಿಲ್ಸ್‌ ಜಿಲ್ಲೆಯಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತಿದ್ದ ಸುರಂಗದಲ್ಲಿ 15 ಕಾರ್ಮಿಕರು ಸಿಲುಕಿದ್ದರು.

ಒಡಿಶಾ ಅಗ್ನಿಶಾಮಕ ದಳ, ಕೋಲ್ ಇಂಡಿಯಾ ಲಿಮಿಟೆಡ್‌, ಕಿರ್ಲೊಸ್ಕರ್‌ ಬ್ರದರ್ಸ್‌, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೈಡ್ರೊಲೊಜಿ ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಿವೆ.

ಅವೈಜ್ಞಾನಿಕ ವಿಧಾನಗಳು ಮತ್ತು ಅಸುರಕ್ಷಿತ ಕ್ರಮಗಳನ್ನು ಅನುಸರಿಸಿ ಗಣಿಗಾರಿಕೆ ನಡೆಯುತ್ತಿದ್ದ ಕಾರಣ, ಎನ್‌ಜಿಟಿ 2014ರಲ್ಲಿಯೇ ನಿಷೇದಿಸಿತ್ತು. ಆದರೂ ಅಕ್ರಮವಾಗಿ ಗಣಿಗಾರಿಕೆ ಮುಂದುವರಿದಿತ್ತು.

ಇನ್ನಷ್ಟು ಸುದ್ದಿಗಳು

ಮೇಘಾಲಯ ದುರಂತ 16ನೇ ದಿನ: 3 ಹೆಲ್ಮೆಟ್‌ ಪತ್ತೆ, ನೀರು ಹೊರಹಾಕುತ್ತಿರುವ ಸಿಬ್ಬಂದಿ

ಮೇಘಾಲಯ ಗಣಿ ಅವಘಡ: 15 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ವಿಳಂಬ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !