ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಿಪಣಿ ನಾಶಕ ಐಎನ್‌ಎಸ್ ಇಂಫಾಲ್‌ಗೆ ಚಾಲನೆ

Last Updated 21 ಏಪ್ರಿಲ್ 2019, 14:06 IST
ಅಕ್ಷರ ಗಾತ್ರ

ಮುಂಬೈ: ಸ್ವದೇಶಿ ನಿರ್ಮಿತ ಹೊಸ ಕ್ಷಿಪಣಿ ನಾಶಕ ಯುದ್ಧನೌಕೆ ಐಎನ್‌ಎಸ್ ಇಂಫಾಲ್ ಅನ್ನು ಶನಿವಾರ ಇಲ್ಲಿನ ಮಜಗಾಂವ್ ಹಡಗುಕಟ್ಟೆಯಿಂದ ಸಮುದ್ರಕ್ಕೆ ಬಿಡಲಾಯಿತು.

ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಂಬಾ ಮತ್ತು ಅವರ ಪತ್ನಿ, ನೌಕಾಪಡೆ ಸಿಬ್ಬಂದಿಯ ಪತ್ನಿಯರ ಕಲ್ಯಾಣ ಮಂಡಳಿಯ ಅಧ್ಯಕ್ಷೆ ರೀನಾ ಲಂಬಾ ಹೊಸ ಯುದ್ಧನೌಕೆಗೆ ಚಾಲನೆ ನೀಡಿದರು.

‘ಪ್ರಾಜೆಕ್ಟ್‌ 15ಬಿ’ ಅಡಿಯಲ್ಲಿ ಈ ನೌಕೆ ಸಿದ್ಧಪಡಿಸಲಾಗಿದೆ. ‘ಭಾರತದಲ್ಲೇ ಉತ್ಪಾದಿಸಿ’ ಯೋಜನೆ ಅಡಿ ಭಾರತೀಯ ನೌಕಾಪಡೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ (ಡಿಆರ್‌ಡಿಒ), ಒಎಫ್‌ಬಿ, ಬಿಇಎಲ್‌, ಇತರ ಸಾರ್ವಜನಿಕ ಮತ್ತು ಖಾಸಗಿ ಉದ್ಯಮ ಸಂಸ್ಥೆಗಳ ಸಹಕಾರದಲ್ಲಿ ಈ ಯುದ್ಧನೌಕೆಯನ್ನು ಸಿದ್ಧಪಡಿಸಲಾಗಿದೆ.

7,300 ಟನ್ ಭಾರ ಹೊರಬಲ್ಲ ಸಾಮರ್ಥ್ಯವಿರುವ ಈ ಯುದ್ಧನೌಕೆ 163 ಮೀಟರ್‌ ಉದ್ದವಿದೆ. ಇದರ ಬೀಮ್‌ 17.4 ಮೀಟರ್‌ನಷ್ಟು ಉದ್ದವಿದೆ. ನಾಲ್ಕು ಗ್ಯಾಸ್‌ ಟರ್ಬೈನ್‌ಗಳನ್ನು ಹೊಂದಿದ್ದು, ಗಂಟೆಗೆ 30 ನಾಟ್ಸ್‌ ವೇಗದಲ್ಲಿ ಚಲಿಸಬಲ್ಲುದಾಗಿದೆ. ಮಲ್ಟಿ ರೋಲ್ ಹೆಲಿಕಾಪ್ಟರ್‌ಗಳನ್ನು ಹೊತ್ತಯ್ಯಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT