ಬದಲಾಗಿದೆ ನಕ್ಸಲರ ಕಾರ್ಯತಂತ್ರ!

7

ಬದಲಾಗಿದೆ ನಕ್ಸಲರ ಕಾರ್ಯತಂತ್ರ!

Published:
Updated:

ರಾಯಪುರ: ಒಂದು ಕಾಲದಲ್ಲಿ ಬಲವಾದ ಹಿಡಿತ ಸಾಧಿಸಿದ್ದ ನೆಲದಲ್ಲೇ ಹಿನ್ನಡೆ ಅನುಭವಿಸುತ್ತಿರುವ ನಕ್ಸಲೀಯರು, ಛತ್ತೀಸಗಡದ ಬಸ್ತಾರ್‌ನಲ್ಲಿ ಹೊಸ ಕಾರ್ಯತಂತ್ರದ ಮೊರೆ ಹೋಗಿದ್ದಾರೆ. ವಿಯೆಟ್ನಾಂನ ಗೆರಿಲ್ಲಾ ಯುದ್ಧದ ಮಾದರಿಯಲ್ಲಿ, ನಕಲಿ ಬಂದೂಕುಗಳನ್ನು ಹಿಡಿದ ಮಾನವನ ಪ್ರತಿಕೃತಿಗಳನ್ನು ಅರಣ್ಯದ ಆಯಕಟ್ಟಿನ ಜಾಗಗಳಲ್ಲಿ ಇರಿಸುತ್ತಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಗಳಲ್ಲಿ ನಕ್ಸಲೀಯರು ಭಾರಿ ಸಾವು ನೋವು ಅನುಭವಿಸಿದ್ದಾರೆ. ಹೀಗಾಗಿ, ಭದ್ರತಾ ಪಡೆಯನ್ನು ಹಿಮ್ಮೆಟ್ಟಿಸುವ ಗುರಿಗೆ ಪೂರಕವಾಗಿ ಈ ಹೊಸ ತಂತ್ರವನ್ನು ಅವರು ಅನುಸರಿಸುತ್ತಿದ್ದಾರೆ.

ಮರಗಳ ಹಿಂದೆ ಇಡಲಾಗಿದ್ದ 13 ಮಾನವ ಪ್ರತಿಕೃತಿಗಳನ್ನು ಭದ್ರತಾ ಪಡೆ ಪತ್ತೆ ಹಚ್ಚಿದೆ. ಕಳೆದ ಎಂಟು ದಿನಗಳಲ್ಲಿ ಸುಕ್ಮಾ ಜಿಲ್ಲೆಯ ನಕ್ಸಲ್‌ ಬಾಧಿತ ದಟ್ಟಾರಣ್ಯದ ವಿವಿಧ ಭಾಗಗಳಲ್ಲಿ ಇವು ಕಂಡುಬಂದಿವೆ.

ಈ ಪ್ರದೇಶದಲ್ಲಿ ನಕ್ಸಲೀಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಮ್ಮ ವಿರುದ್ಧದ ಕಾರ್ಯಾಚರಣೆಗೆ ಬರುವ ಭದ್ರತಾ ಸಿಬ್ಬಂದಿಯ ದಾರಿ ತಪ್ಪಿಸುವುದು ಮತ್ತು ಅವರ ಮೇಲೆ ಮಾನಸಿಕ ಒತ್ತಡ ಹೇರುವುದು ಇದರ ಉದ್ದೇಶ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !