ನಕ್ಸಲ್ ಭೀತಿಗೆ 3 ವರ್ಷಗಳಲ್ಲಿ ಮುಕ್ತಿ: ರಾಜನಾಥ್

7

ನಕ್ಸಲ್ ಭೀತಿಗೆ 3 ವರ್ಷಗಳಲ್ಲಿ ಮುಕ್ತಿ: ರಾಜನಾಥ್

Published:
Updated:
Deccan Herald

ಲಖನೌ: ದೇಶದಲ್ಲಿ ನೆಲೆಯೂರಿರುವ ನಕ್ಸಲ್ ಬೆದರಿಕೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಸಂಪೂರ್ಣ ಕೊನೆಗೊಳಿಸುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಭರವಸೆ ನೀಡಿದ್ದಾರೆ.

ಕ್ಷಿಪ್ರ ಕಾರ್ಯಪಡೆಯ (ಆರ್‌ಎಎಫ್) 26ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಕಾರ್ಯಾಚರಣೆಯು ಕ್ಷಿಪ್ರ, ನಿಖರ ಹಾಗೂ ಜವಾಬ್ದಾರಿಯಿಂದ ಕೂಡಿರಬೇಕು ಎಂದು ಸಲಹೆ ನೀಡಿದರು.

‘ಈ ಹಿಂದೆ ದೇಶದ 126 ಜಿಲ್ಲೆಗಳು ನಕ್ಸಲ್ ಪೀಡಿತ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದವು. ಈಗ ಅವುಗಳ ಸಂಖ್ಯೆ 10–12ಕ್ಕೆ ಇಳಿಕೆಯಾಗಿದೆ ಎಂದು ಹೇಳಿದರು. ಇನ್ನು ಮೂರು ವರ್ಷಗಳಲ್ಲಿ ಎಡಪಂಥೀಯ ತೀವ್ರಗಾಮಿಗಳ ಬೆದರಿಕೆ ಕೊನೆಯಾಗಲಿದೆ. ನಿಮ್ಮ ಕಠಿಣ ಪರಿಶ್ರಮದಿಂದ ಈ ಗುರಿ ಈಡೇರಲಿದೆ’ ಎಂದು ಸಿಆರ್‌ಪಿಎಫ್ ಯೋಧರನ್ನು ಉದ್ದೇಶಿಸಿ ಅವರು ಹೇಳಿದರು.

ಆರ್‌ಎಎಫ್‌ನ 10 ಬೆಟಾಲಿಯನ್‌ಗಳು ಹೈದರಾಬಾದ್, ಅಹಮದಾಬಾದ್, ಅಲಹಾಬಾದ್, ಮುಂಬೈ, ದೆಹಲಿ, ಅಲಿಗಡ, ಕೊಯಮತ್ತೂರು, ಜೆಮ್‌ಶೆಡ್‌ಪುರ, ಭೋಪಾಲ್ ಮತ್ತು ಮೀರಠ್‌ನಲ್ಲಿ ಇವೆ.

ಐದು ಹೊಸ ಬೆಟಾಲಿಯನ್‌ಗಳು ಜೈಪುರ, ವಾರಾಣಸಿ, ಮಂಗಳೂರು, ಬಿಹಾರದ ಹಾಜಪುರ ಹಾಗೂ ಹರಿಯಾಣದ ನುಹ್‌ನಲ್ಲಿ ಇವೆ.

ಕ್ರೂರತ್ವದ ಹಣೆಪಟ್ಟಿ ಬೇಡ
ಸಿಆರ್‌ಪಿಎಫ್‌ನ ವಿಶೇಷ ಘಟಕವಾಗಿ ಕೆಲಸ ಮಾಡುತ್ತಿರುವ ಆರ್‌ಎಎಫ್‌, ದಂಗೆ, ಪ್ರತಿಭಟನೆಯಂತಹ ಪರಿಸ್ಥಿತಿಗಳನ್ನು ನಿಭಾಯಿಸುತ್ತದೆ. ಪಡೆಯು ಕ್ಷಿಪ್ರವಾಗಿ ಕಾರ್ಯಾಚರಣೆಗೆ ಇಳಿಯಬೇಕು. ಆದರೆ ಅಜಾಗರೂಕತೆ ಸಲ್ಲದು ಎಂದು ರಾಜನಾಥ್ ಸಲಹೆ ನೀಡಿದರು.

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಿರಾಯುಧನಾಗಿದ್ದ ಆ್ಯಪಲ್ ಕಂಪನಿ ಉದ್ಯೋಗಿಯೊಬ್ಬರ ಮೇಲೆ ಪೊಲೀಸರೊಬ್ಬರು ಗುಂಡು ಹಾರಿಸಿದ ಘಟನೆ ತೀವ್ರ ವಿವಾದ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಅವರ ಈ ಮಾತುಗಳು ಮಹತ್ವ ಪಡೆದಿವೆ.

ಪೊಲೀಸ್ ಪಡೆಗಳು ಕೂಡಾ ನಾಗರಿಕ ಘಟಕಗಳೇ ಆಗಿವೆ. ಕ್ರೂರತ್ವದ ಹಣೆಪಟ್ಟಿ ಹೊತ್ತುಕೊಳ್ಳುವಂತಹ ಯಾವುದೇ ಕೆಲಸಗಳನ್ನು ಮಾಡಬಾರದು ಎಂದು ಅವರು ಕಿವಿಮಾತು ನೀಡಿದರು. ಗಲಭೆ ನಿಯಂತ್ರಣದಂತಹ ಪರಿಸ್ಥಿತಿಗಳನ್ನು ನಿಭಾಯಿಸುವ ಸಮಯದಲ್ಲಿ ಯಾವ ರೀತಿ ವರ್ತಿಸಬೇಕು ಎಂಬ ತಿಳಿವಳಿಕೆ ಅಗತ್ಯ. ಯಾವ ಸಮಯದಲ್ಲಿ ಮತ್ತು ಎಷ್ಟು ಪ್ರಮಾಣದ ಶಕ್ತಿ ಬಳಸಬೇಕು ಎಂಬ ವಿವೇಚನೆ ಇರಬೇಕು ಎಂದರು.

ಅಂಕಿ–ಅಂಶ
131 -ಹತ್ಯೆಯಾದ ನಕ್ಸಲರು ಮತ್ತು ಭಯೋತ್ಪಾದಕರು
1,278 - ತೀವ್ರಗಾಮಿಗಳ ಬಂಧನ
58 -ಮಂದಿ ಬಂಡುಕೋರರ ಶರಣಾಗತಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !