ಶನಿವಾರ, ನವೆಂಬರ್ 23, 2019
18 °C

ರಾಯಪುರ: ಗುಂಡಿಗೆ ಇಬ್ಬರು ನಕ್ಸಲರು ಬಲಿ

Published:
Updated:

ರಾಯಪುರ: ಛತ್ತೀಸ್‌ಗಡದ ದಾಂತೇವಾಡದಲ್ಲಿ ಭದ್ರತಾಪಡೆಗಳು ನಡೆಸಿದ ಗುಂಡಿನ ಕಾಳಗದಲ್ಲಿ ಇಬ್ಬರು ನಕ್ಸಲರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. 

ಜಿಲ್ಲಾ ಮೀಸಲು ಪಡೆ ಬಂಡುಕೋರರ ನಿಗ್ರಹದ ಸಲುವಾಗಿ ನಡೆಸಿದ ಕಾರ್ಯಾಚರಣೆ ವೇಳೆ ಮುಂಡಾ ಎಂಬ ಹಳ್ಳಿಯಲ್ಲಿ ಗುಂಡಿನ ಚಕಮಕಿ ನಡೆಯಿತು. ದಾಳಿ ನಿಂತ ಬಳಿಕ ಇಬ್ಬರು ನಕ್ಸಲರ ಮೃತ ದೇಹಗಳನ್ನು ಗುರುತಿಸಲಾಗಿದೆ. ಅಲ್ಲದೆ ಸ್ಥಳದಲ್ಲಿ ಶಸ್ತ್ರಾಸ್ತ್ರಗಳೂ ಕಂಡು ಬಂದವು. ಈ ಪ್ರದೇಶದಲ್ಲಿ ಗಸ್ತು ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

 

 

 

 

ಪ್ರತಿಕ್ರಿಯಿಸಿ (+)