ಗುಂಡಿನ ಚಕಮಕಿ-ಗಡಿಯಲ್ಲಿ ನಾಲ್ವರು ಯೋಧರ ಸಾವು

ಮಂಗಳವಾರ, ಏಪ್ರಿಲ್ 23, 2019
25 °C

ಗುಂಡಿನ ಚಕಮಕಿ-ಗಡಿಯಲ್ಲಿ ನಾಲ್ವರು ಯೋಧರ ಸಾವು

Published:
Updated:

ರಾಯಪುರ:ಛತ್ತೀಸಗಡದ ಕಂಕೆರ್ ಜಿಲ್ಲೆಗೆ ಸೇರಿದ ಗ್ರಾಮವೊಂದರ ಹೊರವಲಯದಲ್ಲಿ ನಕ್ಸಲರು ಹಾಗೂ ಬಿಎಸ್‌ಎಫ್ ಯೋಧರ ನಡುವೆ ಗುಂಡಿನ ದಾಳಿ ನಡೆದ ಪರಿಣಾಮ ನಾಲ್ಕು ಮಂದಿ ಯೋಧರು ಮೃತಪಟ್ಟಿದ್ದು ಇಬ್ಬರು ಯೋಧರು ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.

ಮಹ್ಲಾ ಗ್ರಾಮದ ಸಮೀಪ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಸ್ಕಿರ್ಮಿಶ್ ಎಂಬ ಸ್ಥಳದಲ್ಲಿ ಪೊಲೀಸರು ಹಾಗೂ ನಕ್ಸಲರ ನಡುವೆ ಗುಂಡಿನ ದಾಳಿ ನಡೆದಿದೆ. ಪರಿಣಾಮ ನಾಲ್ಕು ಮಂದಿ ಬಿಎಸ್ ಎಫ್ ಯೋಧರು ಮೃತಪಟ್ಟು ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ನಕ್ಸಲ್ ನಿಗ್ರಹಪಡೆಯ ಡಿಐಜಿ ಸುಂದರ್ ರಾಜ್ ಪಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಿಎಸ್ ಎಫ್ ನ 11ನೇ ಬೆಟಾಲಿಯನ್ ನ ಸಿಬ್ಬಂದಿ ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ವಿಷಯ ತಿಳಿದ ಕೂಡಲೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರೂ ನಕ್ಸಲರು ಪರಾರಿಯಾಗಿದ್ದಾರೆ ಎನ್ನಲಾಗಿದೆ.  ಛತ್ತೀಸಗಡದ ಎರಡು ಲೋಕಸಭಾ ಕ್ಷೇತ್ರಗಳಿಗೆ ಇದೇ 18ಕ್ಕೆ ಚುನಾವಣೆ ನಡೆಯಲಿದ್ದು ಮತದಾರರಲ್ಲಿ ಆತಂಕ ಉಂಟು ಮಾಡಲಿಕ್ಕಾಗಿಯೇ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !