ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದಲೇ 8 ಉಪನಗರ ರೈಲು

Last Updated 11 ಮಾರ್ಚ್ 2018, 19:59 IST
ಅಕ್ಷರ ಗಾತ್ರ

ಬೆಂಗಳೂರು: ಇದೇ ಸೋಮವಾರದಿಂದ ಎಂಟು ಹೊಸ ಉಪನಗರ ರೈಲುಗಳು ಸಂಚಾರ ಆರಂಭಿಸಲಿವೆ. ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವು ಈ ರೈಲುಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಹೊಸ ರೈಲುಗಳು ವಾರದಲ್ಲಿ ಆರು ದಿನ (ಭಾನುವಾರ ಹೊರತುಪಡಿಸಿ) ಸೇವೆ ಒದಗಿಸಲಿವೆ. ನಾಲ್ಕು ಮೆಮು (ಮೈನ್‌ಲೈನ್‌ ಎಲೆಕ್ಟ್ರಿಕಲ್‌ ಮಲ್ಟಿಪಲ್‌ ಯುನಿಟ್ಸ್‌) ರೈಲುಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ನಗರ ರೈಲು ನಿಲ್ದಾಣ–ಬೈಯಪ್ಪನಹಳ್ಳಿ–ವೈಟ್‌ ಫೀಲ್ಡ್‌ ಮಾರ್ಗದಲ್ಲಿ ಸಂಚರಿಸಲಿವೆ. ನಾಲ್ಕು ಡೆಮು (ಡೀಸೆಲ್‌ ಎಲೆಕ್ಟ್ರಿಕಲ್‌ ಮಲ್ಟಿಪಲ್‌ ಯುನಿಟ್‌) ರೈಲುಗಳು ಬಾಣಸವಾಡಿ–ಬೈಯಪ್ಪನಹಳ್ಳಿ–ಹೊಸೂರು ಮಾರ್ಗವಾಗಿ ಸಂಚರಿಸಲಿವೆ.

ಬೈಯಪ್ಪನಹಳ್ಳಿಯಲ್ಲಿ ರೈಲು ನಿಲ್ದಾಣ ಹಾಗೂ ಮೆಟ್ರೊ ನಿಲ್ದಾಣಗಳು ಅಕ್ಕಪಕ್ಕದಲ್ಲಿವೆ. ಮೆಟ್ರೊ ಹಾಗೂ ಸಬ್‌ಅರ್ಬನ್‌ ರೈಲುಗಳನ್ನು ಬಳಸಿಕೊಂಡು ಪ್ರಯಾಣವನ್ನು ಯೋಜಿಸಲು ಈ ಹೊಸ ಸೇವೆಯಿಂದ ಅನುಕೂಲವಾಗಲಿದೆ.

ನಗರದಲ್ಲಿ 2006ರ ಅಕ್ಟೋಬರ್‌ 12ರಂದು ಮೊದಲ ಬಾರಿ ಮೆಮು ರೈಲುಗಳ ಸಂಚಾರ ಆರಂಭಿಸಲಾಯಿತು. ಇದರೊಂದಿಗೆ ಆರಂಭವಾದ ಉಪನಗರ ರೈಲು ಸೇವೆ ಈಗ ಜನಪ್ರಿಯಗೊಂಡಿದೆ. ಈ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗಿದೆ. ಹಾಗಾಗಿ ರೈಲುಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವಂತೆ ರೈಲು ಬಳಕೆದಾರರು ಒತ್ತಾಯಿಸಿದ್ದರು.

ಆರಂಭದಲ್ಲಿ ನಿತ್ಯ ಆರು ರೈಲುಗಳು ನಗರದ ವ್ಯಾಪ್ತಿಯಲ್ಲಿ ಸೇವೆ ಒದಗಿಸುತ್ತಿದ್ದವು. ಇವುಗಳ ಸಂಖ್ಯೆ ಈಗ 108ಕ್ಕೆ ಹೆಚ್ಚಳವಾಗಿದೆ. ಇನ್ನೂ 8 ಹೊಸ ರೈಲುಗಳ ಸೇವೆಯನ್ನು ಮುಂದಿನ ವಾರದಿಂದ ಆರಂಭಿಸಲಾಗುವುದು ಎಂದು ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಹಾಗೂ ರೈಲ್ವೆ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ ಉಪನಗರ ರೈಲು ಯೊಜನೆ ಜಾರಿಯಾಗುತ್ತಿದೆ.

ಹೊಸ ಮೆಮು ರೈಲುಗಳ ವೇಳಾಪಟ್ಟಿ

ಸಂಖ್ಯೆ, ಎಲ್ಲಿಂದ, ಎಲ್ಲಿಗೆ, ಹೊರಡುವ ಸಮಯ, ಆಗಮನ ಸಮಯ

06568, ಬೈಯಪ್ಪನಹಳ್ಳಿ, ವೈಟ್‌ಫೀಲ್ಡ್‌, 16.45, 17.05

06567, ವೈಟ್‌ಫೀಲ್ಡ್‌, ಬೈಯಪ್ಪನಹಳ್ಳಿ, 09.00, 09.20

06569, ಬೈಯಪ್ಪನಹಳ್ಳಿ, ಕೆಎಸ್‌ಆರ್‌, 18.45, 19.15

06570, ಕೆಎಸ್‌ಆರ್‌, ಬೈಯಪ್ಪನಹಳ್ಳಿ, 07.50, 08.15

ಹೊಸ ಡೆಮು ರೈಲುಗಳ ವೇಳಾಪಟ್ಟಿ

ಸಂಖ್ಯೆ, ಎಲ್ಲಿಂದ, ಎಲ್ಲಿಗೆ, ಹೊರಡುವ ಸಮಯ, ಆಗಮನ ಸಮಯ

06571, ಬಾಣಸವಾಡಿ, ಹೊಸೂರು, 09.50, 11.00

06572, ಹೊಸೂರು, ಬಾಣಸವಾಡಿ, 11.15, 12.25

06573, ಬಾಣಸವಾಡಿ, ಹೊಸೂರು, 12.40, 13.45

06574, ಹೊಸೂರು, ಬಾಣಸವಾಡಿ, 15.20, 16.40

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT