ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ: ಶರದ್ ಪವಾರ್

ಸೋಮವಾರ, ಮಾರ್ಚ್ 25, 2019
26 °C

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ: ಶರದ್ ಪವಾರ್

Published:
Updated:

ಪುಣೆ: ನ್ಯಾಷನಲ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರುವುದಾಗಿ ಘೋಷಿಸಿದ್ದಾರೆ. 

ಪವಾರ್, ಮಹಾರಾಷ್ಟ್ರದ ನೈರುತ್ಯ ಭಾಗದಲ್ಲಿರುವ ಮಧಾ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಭಾವಿಸಲಾಗಿತ್ತು. ಇದೀಗ ಇದೇ ಪಕ್ಷದ ಮುಖಂಡ ವಿಜಯ್ ಸಿಂಗ್ ಮಹಿತೆ ಪಾಟೀಲ್ ಅವರನ್ನು ಕಣಕ್ಕಿಳಿಸಲು ಪಕ್ಷ ಸಜ್ಜಾಗಿದೆ. 

ಕುಟುಂಬಸ್ಥರ ಜತೆ ಮಾತುಕತೆ ನಡೆಸಿದ ಬಳಿಕ ಪುಣೆಯಲ್ಲಿ ಪಕ್ಷದ ಹಿರಿಯ ಮುಖಂಡರೊಟ್ಟಿಗೆ ಸಭೆ ನಡೆಸಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. 

‘ಮುಂದಿನ ಪೀಳಿಗೆಯವರಿಗೆ ಅವಕಾಶ ಮಾಡಿಕೊಡಬೇಕು. ಈ ಲೋಕಸಭೆ ಚುನಾವಣೆಯಲ್ಲಿ ನನ್ನ ಕುಟುಂಬದ ಇಬ್ಬರು ಸದಸ್ಯರು ಸ್ಪರ್ಧಿಸುತ್ತಿದ್ದಾರೆ. ಹಾಗಾಗಿ ಈ ನಿರ್ಧಾರ ತೆಗೆದುಕೊಳ್ಳಲು ಇದು ಸೂಕ್ತ ಸಮಯ ಎಂದೆನಿಸಿತು. ಅಲ್ಲದೇ ನಾನು ಈಗಾಗಲೇ 14 ಬಾರಿ ಸ್ಪರ್ಧಿಸಿದ್ದೇನೆ. ಆದ ಕಾರಣ ಚುನಾವಣೆಯಿಂದ ದೂರ ಉಳಿಯಲಿದ್ದೇನೆ’ ಎಂದು  ಹೇಳಿದರು. 

ಶರದ್ ಪವಾರ್ ಅವರ ಸಂಬಂಧಿ ಪಾರ್ಥ್ ಪವಾರ್ ಮಾವಾಳದಲ್ಲಿ ಹಾಗೂ ಮಗ ಅಜಿತ್ ಪವಾರ್ ಪಿಂಪ್ರಿ–ಚಿಂಚ್ವಾಡದಲ್ಲಿ (ಮಾವಾಳದ ವಲಯ) ಕಣಕ್ಕಿಳಿಯಲ್ಲಿದ್ದಾರೆ. 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !