ನಿರ್ಮಲಾ ವಿರುದ್ಧ ‘ಸ್ತ್ರೀದ್ವೇಷದ’ ಟೀಕೆಗೆ ರಾಹುಲ್‌ಗೆ ಮಹಿಳಾ ಆಯೋಗ ನೋಟಿಸ್‌

7

ನಿರ್ಮಲಾ ವಿರುದ್ಧ ‘ಸ್ತ್ರೀದ್ವೇಷದ’ ಟೀಕೆಗೆ ರಾಹುಲ್‌ಗೆ ಮಹಿಳಾ ಆಯೋಗ ನೋಟಿಸ್‌

Published:
Updated:

ನವದೆಹಲಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ‘ಅತ್ಯಂತ ತಪ್ಪುಗ್ರಹಿಕೆಯ, ಅಕ್ರಮಣಕಾರಿ ಮತ್ತು ಅಸಂಬದ್ಧ’ ಟೀಕೆಗಳನ್ನು ಮಾಡಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಸಿಡಬ್ಲ್ಯು) ನೋಟಿಸ್ ನೀಡಿದೆ.

ರಾಹುಲ್‌ ಗಾಂಧಿ ಅವರು ನಿರ್ಮಲಾ ಸೀತಾರಾಮನ್‌ ಅವರ ವಿರುದ್ಧ ಜೈಪುರದಲ್ಲಿ ನಡೆದ ರ‍್ಯಾಲಿಯಲ್ಲಿ ವ್ಯಂಗ್ಯವಾಡಿದ್ದರು.

‘ಮಹಿಳಾ ಮಂತ್ರಿಯ ವಿರುದ್ಧ ಹೇಳಿಕೆ ನೀಡಿ ನೀವು ಅವಮಾನ ಮಾಡಿದ್ದೀರಿ’ ಎಂದು ವರದಿಯಾಗಿದೆ. ಜ.9ರಂದು ವಿವಿಧ ಮುದ್ರಣ ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ವರದಿಗಳನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಲಾಗಿದೆ ಎಂದು ಮಹಿಳಾ ಆಯೋಗ ನೋಟಿಸ್‌ನಲ್ಲಿ ಹೇಳಿದೆ.

‘56 ಇಂಚಿನ ಎದೆಯ ಕಾವಲುಗಾರ ಓಡಿ ಹೋಗಿ ಮಹಿಳೆಗೆ ಹೇಳಿದರು, ಸೀತಾರಾಮನ್‌ ಅವರೆ ನನ್ನನ್ನು ರಕ್ಷಿಸಿ. ನನ್ನನ್ನು ರಕ್ಷಿಸಿಕೊಳ್ಳಲು ನನಗೆ ಸಾಧ್ಯವಾಗುವುದಿಲ್ಲ, ನನ್ನನ್ನು ರಕ್ಷಿಸಿ’ ಎಂದು ಕೇಳಿದ್ದಾರೆಂದು ರಾಹುಲ್‌ ಗಾಂಧಿ ಬುಧವಾರ ನಡೆದ ರ‍್ಯಾಲಿಯಲ್ಲಿ ಮೋದಿ ಮತ್ತು ರಕ್ಷಣಾ ಸಚಿವರ ಕುರಿತಾಗಿ ಟೀಕಿಸಿದ್ದರು.

ಈ ಹೇಳಿಕೆಗಳು ಅಕ್ಷಮ್ಯ, ಅಕ್ರಮಣಕಾರಿ, ನೈತಿಕತೆ ಇಲ್ಲದ ಮತ್ತು ಸ್ತ್ರೀಸಮಾನತೆ ಘನತೆಗೆ ಅಗೌರವನ್ನು ತೋರುತ್ತವೆ ಎಂದು ಆಯೋಗ ಹೇಳಿದೆ.

ಜವಾಬ್ದಾರಿಯುತ ಸ್ಥಾನಗಳನ್ನು ಹೊಂದಿರುವ ವ್ಯಕ್ತಿಗಳ ಇಂತಹ ಬೇಜವಾಬ್ದಾರಿಯುತ ಮತ್ತು ಅಮಾನವೀಯ ಅಭಿಪ್ರಾಯಗಳನ್ನು ಆಯೋಗ ತೀವ್ರವಾಗಿ ಖಂಡಿಸುತ್ತದೆ ಎಂದು ನೋಟಿಸ್‌ನಲ್ಲಿ ಹೇಳಿದೆ.

‘ರಾಹುಲ್‌ ಅವರ ಹೇಳಿಕೆ ಒಬ್ಬ ಮಹಿಳೆ ನಮ್ಮನ್ನು ಹೇಗೆ ರಕ್ಷಿಸಬಲ್ಲರು? ಎಂಬ ಅರ್ಥವನ್ನು ಸೂಚಿಸುತ್ತದೆ. ಮಹಿಳೆಯರು ದುರ್ಬಲರಾಗಿದ್ದಾರೆ ಎಂದು ಅವರು ಭಾವಿಸುತ್ತಾರೆಯೇ? ಅತಿ ದೊಡ್ಡ ಪ್ರಜಾಪ‍್ರಭುತ್ವದ ನಿಪುಣ ರಕ್ಷಣಾ ಮಂತ್ರಿ ದುರ್ಬಲ ವ್ಯಕ್ತಿಯೇ?’ ಎಂದು ಎನ್‌ಸಿಡಬ್ಲ್ಯು ಮುಖ್ಯಸ್ಥೆ ರೇಖಾ ಶರ್ಮಾ ಟ್ವೀಟ್ ಮಾಡಿ, ರಾಹುಲ್‌ ವಿರುದ್ಧ ಕಿಡಿಕಾರಿದ್ದಾರೆ.

ರಾಹುಲ್‌ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ಟೀಕೆ ಮಾಡಿ ಟ್ವೀಟ್‌ ಮಾಡಿದ್ದು, ‘ಗೌರವಾನ್ವಿತ ಮೋದಿ ಅವರೆ ಮಹಿಳೆಗೆ ಗೌರವ ತೋರುವ ಸಂಸ್ಕೃತಿ ನಮಗೆ ಮನೆಯಿಂದಲೇ ಆರಂಭವಾಗುತ್ತದೆ’ ಎಂದು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !