ಶನಿವಾರ, ಅಕ್ಟೋಬರ್ 19, 2019
22 °C

ಶೀಘ್ರದಲ್ಲೇ ಎನ್‌ಡಿಆರ್‌ಎಫ್‌ಗೂ ಬರಲಿದ್ದಾರೆ ಮಹಿಳಾ ಸಿಬ್ಬಂದಿ

Published:
Updated:

ನವದೆಹಲಿ: ಮುಂದಿನ ಒಂದು ವರ್ಷದ ಒಳಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ಹೊಸ ಬೆಟಾಲಿಯನ್‌ಗಳಲ್ಲಿ ಮಹಿಳೆಯರನ್ನೂ ನಿಯೋಜಿಸಲಾಗುವುದು ಎಂದು ಉನ್ನತ ಮಟ್ಟದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎನ್‌ಡಿಆರ್‌ಎಫ್‌ನಲ್ಲಿ ಮಹಿಳಾ ಸಿಬ್ಬಂದಿಯನ್ನೂ ನಿಯೋಜಿಸುವ ಬಗ್ಗೆ ಕೇಂದ್ರ ಸರ್ಕಾರ 2018ರಲ್ಲಿ ಪ್ರಸ್ತಾವ ಸಿದ್ಧಪಡಿಸಿತ್ತು.

ಇದನ್ನೂ ಓದಿ: ಸೇನಾ ಸಮವಸ್ತ್ರ ಧರಿಸುವ ಕನಸಿಗೆ ನೂರಾರು ಕಿ.ಮೀ ಪ್ರಯಾಣಿಸಿದ ಯುವತಿಯರು!

‘ಈ ಹಿಂದೆ ಮಹಿಳಾ ಸಿಬ್ಬಂದಿಗೆ ಬೇಕಾದ ಮೂಲಸೌಕರ್ಯ ಮತ್ತು ಸೌಲಭ್ಯಗಳು ನಮ್ಮಲ್ಲಿ ಇರಲಿಲ್ಲ. ಆದರೆ ಈಗ ಮಹಿಳಾ ಸಿಬ್ಬಂದಿಗೆ ಒದಗಿಸಬೇಕಿರುವ ಸೌಲಭ್ಯ ಹೊಂದಿದ್ದೇವೆ. ಮಹಿಳಾ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದ ಪ್ರಕ್ರಿಯೆ ಈಗಾಗಲೇ ಆರಂಭಿಸಿದ್ದೇವೆ’ ಎಂದು ಎನ್‌ಡಿಆರ್‌ಎಫ್‌ನ ಪ್ರಧಾನ ನಿರ್ದೇಶಕ ಎಸ್‌.ಎನ್.ಪ್ರಧಾನ್ ತಿಳಿಸಿದ್ದಾರೆ.

ಪ್ರಧಾನ್ ಅವರು ಇತ್ತೀಚೆಗಷ್ಟೇ ಎನ್‌ಡಿಆರ್‌ಎಫ್‌ನ ಎರಡನೇ ಹೊಸ ಬೆಟಾಲಿಯನ್‌ನ ಪ್ರಧಾನ ಕ್ಯಾಂಪಸ್‌ ಅನ್ನು ಪಶ್ಚಿಮ ಬಂಗಾಳದ ಹರಿನ್‌ಘಟದಲ್ಲಿ ಉದ್ಘಾಟಿಸಿದ್ದಾರೆ.

ಇದನ್ನೂ ಓದಿ: ಯುದ್ಧರಂಗದಲ್ಲಿ ಮಹಿಳೆಗೆ ಅವಕಾಶ ಸೇನೆಯ ನಿರ್ಧಾರ ಕ್ರಾಂತಿಕಾರಕ

‘ಹೊಸ ನಾಲ್ಕು ಬೆಟಾಲಿಯನ್‌ಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಮಹಿಳಾ ಸಿಬ್ಬಂದಿಯನ್ನು ನೇಮಿಸುವ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಇದು ಮುಂದಿನ ಒಂದು ವರ್ಷದಲ್ಲಿ ಜಾರಿಗೆ ಬರಲಿದೆ’ ಎಂದೂ ಪ್ರಧಾನ್ ತಿಳಿಸಿದ್ದಾರೆ.

ಜಮ್ಮು–ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ  ಎನ್‌ಡಿಆರ್‌ಎಫ್ ಹೆಚ್ಚುವರಿಯಾಗಿ ನಾಲ್ಕು ಬೆಟಾಲಿಯನ್‌ಗಳನ್ನು ಹೊಂದಲಿದೆ.

ಇನ್ನಷ್ಟು...

ಮಹಿಳಾ ಸೇನಾ ಭರ್ತಿ ರ್‍ಯಾಲಿ ಆರಂಭ

ಬೆಳಗಾವಿಯಲ್ಲಿ ಮಹಿಳಾ ಸೈನಿಕರ ನೇಮಕಾತಿ ರ‍್ಯಾಲಿ

Post Comments (+)