ಸ್ವಚ್ಛ ಭಾರತ ಅಭಿಯಾನದಡಿ 60 ಲಕ್ಷ ಶೌಚಾಲಯ ನಿರ್ಮಾಣ

7

ಸ್ವಚ್ಛ ಭಾರತ ಅಭಿಯಾನದಡಿ 60 ಲಕ್ಷ ಶೌಚಾಲಯ ನಿರ್ಮಾಣ

Published:
Updated:
Deccan Herald

ನವದೆಹಲಿ: ಸ್ವಚ್ಛ ಭಾರತ ಅಭಿಯಾನದಡಿ ದೇಶದಾದ್ಯಂತ 60.5 ಲಕ್ಷ ಮನೆಗಳಲ್ಲಿ  ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ. 66 ಲಕ್ಷ ಶೌಚಾಲಯ ನಿರ್ಮಾಣ ಉದ್ದೇಶವಿದ್ದು, ಈವರೆಗೆ ಶೇ 91ರಷ್ಟು ಗುರಿ ಸಾಧಿಸಲಾಗಿದೆ. 

ಅಭಿಯಾನದಡಿ 4.7 ಲಕ್ಷ ಸಾರ್ವಜನಿಕ ಟಾಯ್ಲೆಟ್ ಕಟ್ಟಲಾಗಿದೆ. 5.07 ಲಕ್ಷ ಶೌಚಾಲಯ ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿತ್ತು ಎಂದು ಕೇಂದ್ರ ವಸತಿ ಹಾಗೂ ನಗರ ವ್ಯವಹಾರ ಸಚಿವಾಲಯ ತಿಳಿಸಿದೆ.

ಚರಂಡಿ ಹಾಗೂ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಮಾರ್ಗಸೂಚಿಗಳನ್ನು ‘ಜಾಗತಿಕ ಶೌಚಾಲಯ ದಿನ’ದ ಅಂಗವಾಗಿ ಬಿಡುಗಡೆ ಮಾಡಲಾಯಿತು. 

19 ರಾಜ್ಯಗಳು ಈಗಾಗಲೇ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಿಕೊಂಡಿವೆ ಎಂದು ಸಚಿವಾಲಯದ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ತಿಳಿಸಿದ್ದಾರೆ. 

ಮೋದಿ ಶ್ಲಾಘನೆ: ಕಳೆದ ನಾಲ್ಕು ವರ್ಷಗಳಲ್ಲಿ ನೈರ್ಮಲ್ಯ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದರು. ಈ ಬಗ್ಗೆ ಸರ್ಕಾರಕ್ಕೆ ಇರುವ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. 

ಸ್ವಚ್ಛ ಭಾರತ ಹಾಗೂ ನೈರ್ಮಲ್ಯ ಸೌಲಭ್ಯಗಳ ಹೆಚ್ಚಳ ನಿಜಕ್ಕೂ ಜನರ ಅಭಿಯಾನದ ಫಲ ಎಂದು ಅವರು ಹೇಳಿದರು. ದೇಶದ ಮಹಿಳೆಯರು ಹಾಗೂ ಯುವಕರು ಇದರ ಮುಂದಾಳತ್ವ ವಹಿಸಿದ್ದಾರೆ ಎಂದು ಟ್ವಿಟರ್‌ನಲ್ಲಿ ಅವರು ಪ್ರಶಂಸಿಸಿದ್ದಾರೆ. ಸ್ವಚ್ಛ ಭಾರತ ಸಾಕಾರಗೊಳ್ಳಲು ಕಾರಣರಾದ ಎಲ್ಲರಿಗೂ ಅವರು ಅಭಿನಂದನೆ ಸಲ್ಲಿಸಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !