ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನಾತಕೋತ್ತರ ವೈದ್ಯ ಪದವಿ ಪ್ರವೇಶಕ್ಕೆ ‘ನೀಟ್’ ಬೇಡ

ಎಂಬಿಬಿಎಸ್ ಅಂತಿಮ ಪರೀಕ್ಷೆಯೇ ಸಾಕು: ತಿದ್ದುಪಡಿ ಮಸೂದೆಯಲ್ಲಿ ಪ್ರಸ್ತಾವ
Last Updated 14 ಜುಲೈ 2019, 20:03 IST
ಅಕ್ಷರ ಗಾತ್ರ

ನವದೆಹಲಿ: ಸ್ನಾತಕೋತ್ತರ ಪದವಿ ಪಡೆಯುವ ಹಂಬಲದಲ್ಲಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಟ್‌ ಪರೀಕ್ಷೆ ಬೇಕಿಲ್ಲ ಎಂಬ ಪ್ರಸ್ತಾವವನ್ನು ಕೇಂದ್ರ ಆರೋಗ್ಯ ಇಲಾಖೆ ಮುಂದಿಟ್ಟಿದೆ. ಎಂ.ಡಿ ಹಾಗೂ ಎಂ.ಎಸ್‌ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ನೀಟ್–ಪಿ.ಜಿ ಬದಲಾಗಿ, ಎಂಬಿಬಿಎಸ್ ಅಂತಿಮ ಪರೀಕ್ಷೆಯೇ ಸಾಕು ಎಂದಿದೆ.

ಈ ಕುರಿತ ತಿದ್ದುಪಡಿ ಮಸೂದೆಯು ಸದ್ಯದಲ್ಲೇ ಕೇಂದ್ರ ಸಚಿವ ಸಂಪುಟಕ್ಕೆ ಸಲ್ಲಿಕೆಯಾಗಲಿದೆ.‍ಪ್ರಧಾನಿ ಕಚೇರಿಯ ನಿರ್ದೇಶನದ ಮೇರೆಗೆ ಮಸೂದೆಯಲ್ಲಿ ತಿದ್ದುಪಡಿ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ವೈದ್ಯಕೀಯ ಪರಿಷತ್‌ (ಎನ್‌ಎಂಸಿ) ಮಸೂದೆಯಲ್ಲಿನ ತಿದ್ದುಪಡಿ ಪ್ರಕಾರ, ‘ನ್ಯಾಷನಲ್‌ ಎಕ್ಸಿಟ್ ಟೆಸ್ಟ್ (ನೆಕ್ಸ್ಟ್‌) ಫಲಿತಾಂಶದ ಆಧಾರದ ಮೇಲೆ ಸ್ನಾತಕೋತ್ತರ ಪದವಿ ಪ್ರವೇಶ ನಡೆಯಲಿದೆ. ಎಂಬಿಬಿಎಸ್ ಕೋರ್ಸ್‌ ಅವಧಿಯಲ್ಲೇ ನಡೆಯುವ ‘ನೆಕ್ಸ್ಟ್‌’ ಪರೀಕ್ಷೆಯನ್ನು ದೇಶದಾದ್ಯಂತ ಸಾಮಾನ್ಯ ಪರೀಕ್ಷೆಯಾಗಿ ಜಾರಿಗೆ ತರ
ಲಾಗುತ್ತದೆ. ಇನ್ನುಮುಂದೆ ವೈದ್ಯಕೀಯ ಸ್ನಾತಕೋತ್ತರ ಪದವಿ (ಪಿಜಿ) ಪ್ರವೇಶಕ್ಕೆ ಎಂಬಿಬಿಎಸ್ ಅಂತಿಮ ಪರೀಕ್ಷೆ ಪೂರ್ಣ
ಗೊಂಡ ಬಳಿಕ ಯಾವುದೇ ಪ್ರತ್ಯೇಕ ಪರೀಕ್ಷೆಗೆ ಹಾಜರಾಗಬೇಕಿಲ್ಲ’ ಎಂದು ಉಲ್ಲೇಖಿಸಲಾಗಿದೆ.

ಎಂಬಿಬಿಎಸ್ ಕೋರ್ಸ್ ಪೂರ್ಣಗೊಳಿಸಿದ ಬಳಿಕ ವೈದ್ಯ ವೃತ್ತಿ ಆರಂಭಕ್ಕೆ ಪರವಾನಗಿ ಪಡೆಯಲು ಯಾವುದೇ ರೀತಿಯ ಪ್ರತ್ಯೇಕ ಪರೀಕ್ಷೆಗೆ ಸಹ ಹಾಜರಾಗಬೇಕಿಲ್ಲ ಎಂದೂ ತಿದ್ದುಪಡಿ ಮಸೂದೆ ಸ್ಪಷ್ಟಪಡಿಸಿದೆ.

ಏಮ್ಸ್‌ ಪ್ರವೇಶಕ್ಕೆ ಪರೀಕ್ಷೆ: ಆದರೆ, ಏಮ್ಸ್‌ನಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಪ್ರತ್ಯೇಕ ಪರೀಕ್ಷೆ ನಿಯಮ ಮುಂದುವರಿಯಲಿದೆ.ಜೊತೆಗೆ ಡಿಎಂ/ಎಂಸಿಎಚ್‌ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಇರುವ ರಾಷ್ಟ್ರೀಯ ಮಟ್ಟದ ನೀಟ್ ಸೂಪರ್ ಸ್ಪೆಷಾಲಿಟಿ ಪ್ರವೇಶ ಪರೀಕ್ಷೆ ಯಥಾಪ್ರಕಾರ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.

ಬ್ರಿಜ್‌ ಕೋರ್ಸ್ ಇಲ್ಲ:1956ರ ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆಗೆ ಬದಲಾಗಿ ರೂಪಿಸಿರುವ ಎನ್‌ಎಂಸಿ ಮಸೂದೆಯನ್ನು 2017ರಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಇದರಲ್ಲಿದ್ದ ಒಂದು ನಿಯಮ ವಿವಾದ ಸೃಷ್ಟಿಸಿ ದೇಶದಾದ್ಯಂತ ಪ್ರತಿಭಟನೆ ನಡೆದದ್ದರಿಂದ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ಮಸೂದೆಯನ್ನು ಒಪ್ಪಿಸಲಾಗಿತ್ತು. ಇತರೆ ಬೇರೆ ಬೇರೆ ವೈದ್ಯಕೀಯ ಪದ್ಧತಿ ಅನುಸರಿಸುತ್ತಿರುವ ವೈದ್ಯರು ‘ಅಲೋಪಥಿ’ ಚಿಕಿತ್ಸೆಯನ್ನೂ ನೀಡಲು ಸಾಧ್ಯವಾಗುವಂತಹ ‘ಬ್ರಿಜ್‌ ಕೋರ್ಸ್‌’ ಪಡೆಯಲು ಅವಕಾಶ ನೀಡುವ ನಿಯಮಕ್ಕೆ ವಿರೋಧ ವ್ಯಕ್ತವಾಗಿತ್ತು.

ಮಾರ್ಚ್ 2018ರಲ್ಲಿ ಸಂಸದೀಯ ಸ್ಥಾಯಿ ಸಮಿತಿ ಮಾಡಿದ ಶಿಫಾರಸುಗಳನ್ನು ಆಧರಿಸಿ,ಬ್ರಿಜ್‌ ಕೋರ್ಸ್‌ ನಡೆಸುವ ನಿರ್ಧಾರವನ್ನು ಆರೋಗ್ಯ ಸಚಿವಾಲಯ ಕೈಬಿಟ್ಟಿತ್ತು. ಜತೆಗೆ ಕೆಲವು ಬದಲಾವಣೆಗಳನ್ನೂ ಸಮಿತಿ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT