ಎಲ್ಲ ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳಿಗೆ ಒಂದೇ ಸಂಸ್ಥೆ

7
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ರೂಪುರೇಷೆ ಸಿದ್ಧ l 2019ರಿಂದಲೇ ಎನ್‌ಟಿಎ ಕಾರ್ಯಾರಂಭ

ಎಲ್ಲ ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳಿಗೆ ಒಂದೇ ಸಂಸ್ಥೆ

Published:
Updated:
ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾಡೇಕರ್ ಎನ್‌ಟಿಎ ಕುರಿತು ಮಾಹಿತಿ ನೀಡಿದರು –ಪಿಟಿಐ ಚಿತ್ರ

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ಒಂದು ಸ್ವಾಯತ್ತ ಸಂಸ್ಥೆಯಾಗಿರಲಿದೆ. ರಾಷ್ಟ್ರಮಟ್ಟದ ಎಲ್ಲಾ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಈ ಸಂಸ್ಥೆ ಆರ್ಥಿಕವಾಗಿ ಸ್ವಾವಲಂಬಿಯಾಗಿರಲಿದೆ.

ಪ್ರವೇಶ ಪರೀಕ್ಷೆಗಳನ್ನು ‘ವಿದ್ಯಾರ್ಥಿ ಸ್ನೇಹಿ’ಯನ್ನಾಗಿಸುವ ಮತ್ತು ಸಂಪೂರ್ಣ ಪಾರದರ್ಶಕಗೊಳಿಸುವ ಉದ್ದೇಶದಿಂದ ಅಸ್ತಿತ್ವಕ್ಕೆ ತಂದಿರುವ ’ಎನ್‌ಟಿಎ’ ಸ್ವರೂಪ ಹಾಗೂ ಕಾರ್ಯವಿಧಾನ ಈ ಮುಂದಿನಂತಿದೆ.

ಯಾವೆಲ್ಲಾ ಪರೀಕ್ಷೆಗಳು

* ಜೆಇಇ– ಜಂಟಿ ಪ್ರವೇಶ ಪರೀಕ್ಷೆ

* ಎನ್‌ಇಇಟಿ– ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ

* ಎನ್‌ಇಟಿ– ರಾಷ್ಟ್ರೀಯ ಅರ್ಹತಾ ಪರೀಕ್ಷೆ

* ಸಿಎಂಎಟಿ– ಸಾಮಾನ್ಯ ಆಡಳಿತ ನಿರ್ವಹಣಾ ಪರೀಕ್ಷೆ

* ಜಿಪಿಟಿಎ– ಸ್ನಾತಕೋತ್ತರ ಫಾರ್ಮಸಿ ಕೋರ್ಸ್ ಪರೀಕ್ಷೆ

**

ಪರೀಕ್ಷಾ ವಿಧಾನ

* ಈಗ ಚಾಲ್ತಿಯಲ್ಲಿರುವ ಪಠ್ಯಕ್ರಮ, ಪ್ರಶ್ನೆಗಳ ಸ್ವರೂಪ, ಭಾಷೆ ಮತ್ತು ಪರೀಕ್ಷಾ ಶುಲ್ಕ ಮುಂದುವರೆಯಲಿದೆ

* ಎಲ್ಲಾ ಪರೀಕ್ಷೆಗಳು ಆನ್‌ಲೈನ್‌ನಲ್ಲೇ ನಡೆಯಲಿವೆ. ಪ್ರಶ್ನೆಪತ್ರಿಕೆಗಳು ಸೋರಿಕೆಯಾಗದಂತಹ ವ್ಯವಸ್ಥೆಯನ್ನು ಅನುಸರಿಸಲಾಗುತ್ತದೆ

* ಪರೀಕ್ಷೆಯ ವಿಧಾನ ಕುರಿತು ಇದೇ ಆಗಸ್ಟ್‌ನಲ್ಲಿ ತರಬೇತಿ ಕಾರ್ಯಕ್ರಮ ಆರಂಭವಾಗಲಿದೆ. ತರಬೇತಿಯ ಮಾಹಿತಿಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ 

* ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಜಿಲ್ಲಾ ಉಪವಿಭಾಗಗಳಲ್ಲಿ ಪರೀಕ್ಷೆಯನ್ನು ಆಯೋಜಿಸಲಾಗುತ್ತದೆ

* ಒಂದೇ ಪರೀಕ್ಷೆಯು ಹಲವು ದಿನಗಳ ಕಾಲ ನಡೆಯಲಿದೆ. ವಿದ್ಯಾರ್ಥಿ ತನಗೆ ಅನುಕೂಲವಾಗುವ ದಿನದಂದು ಪರೀಕ್ಷೆಯನ್ನು ಬರೆಯಬಹುದು

* 2 ಜೆಇಇ ಮತ್ತು ಎನ್‌ಇಇಟಿಗಳನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ

* ಎರಡೂ ಪರೀಕ್ಷೆಗಳಲ್ಲಿ ಯಾವುದರಲ್ಲಿ ಹೆಚ್ಚು ಅಂಕ ಬಂದಿರುತ್ತದೋ, ಆ ಅಂಕವನ್ನು ಕೌನ್ಸಲಿಂಗ್‌ನಲ್ಲಿ ಪರಿಗಣಿಸಲಾಗುತ್ತದೆ

ಜನವರಿ+ಏಪ್ರಿಲ್

ಜೆಇಇ ನಡೆಯಲಿರುವ ತಿಂಗಳುಗಳು

ಫೆಬ್ರುವರಿ+ಮೇ

ಎನ್‌ಇಇಟಿ ನಡೆಯಲಿರುವ ತಿಂಗಳುಗಳು

**

ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಗಳ ಪರಮೋಚ್ಛ ಸಂಸ್ಥೆ

ದೇಶದ ಪ್ರಮುಖ ಶೈಕ್ಷಣಿಕ ತಜ್ಞ ಈ ಸಂಸ್ಥೆಯ ಮುಖ್ಯಸ್ಥರು ಆಗಲಿದ್ದಾರೆ. ಕೇಂದ್ರ ಸರ್ಕಾರವೇ ನೇಮಕ ಮಾಡಲಿದೆ

ದೇಶದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಲ್ಲಿನ 9 ತಜ್ಞರು ಎನ್‌ಟಿಎ ಮಂಡಳಿಯ ಸದಸ್ಯರಾಗಲಿದ್ದಾರೆ

₹ 25 ಕೋಟಿ, ಸಂಸ್ಥೆಗೆ ಸರ್ಕಾರದಿಂದ ಸಿಗಲಿರುವ ಆರಂಭಿಕ ಅನುದಾನ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !