ಖುಷ್ವಂತ್‌ ಸಿಂಗ್‌ ಲೇಖನಗಳ ಸಂಗ್ರಹ ಪ್ರಕಟ

7

ಖುಷ್ವಂತ್‌ ಸಿಂಗ್‌ ಲೇಖನಗಳ ಸಂಗ್ರಹ ಪ್ರಕಟ

Published:
Updated:

ನವದೆಹಲಿ: ಲೇಖಕ ಖುಷ್ವಂತ್‌ ಸಿಂಗ್‌ ತಮ್ಮ ತವರು ನೆಲ ಪಂಜಾಬ್‌ ಮತ್ತು ಅಲ್ಲಿನ ಜನರ ಕುರಿತು ಬರೆದಿರುವ ಲೇಖನಗಳ ಸಂಗ್ರಹವನ್ನು, ಅವರು ನಿಧನರಾದ ನಾಲ್ಕು ವರ್ಷಗಳ ನಂತರ ಹೊರತರಲಾಗಿದೆ.

‘ಪಂಜಾಬ್‌, ಪಂಜಾಬೀಸ್‌ ಆ್ಯಂಡ್‌ ಪಂಜಾಬಿಯತ್‌: ರಿಫ್ಲೆಕ್ಷನ್ಸ್‌ ಆನ್‌ ಎ ಲ್ಯಾಂಡ್‌ ಆ್ಯಂಡ್‌ ಇಟ್ಸ್‌ ಪೀಪಲ್‌’ ಪುಸ್ತಕವನ್ನು ಸಿಂಗ್‌ ಅವರ ಪುತ್ರಿ ಮಾಲಾ ದಯಾಳ್‌ ಸಂಪಾದಿಸಿದ್ದಾರೆ.

‘ಪಂಜಾಬ್‌ನ ಇತಿಹಾಸ, ಅಲ್ಲಿನ ಜನರ ಸಂಸ್ಕೃತಿ, ಧರ್ಮ, ಸಾಹಿತ್ಯ ಹಾಗೂ ಕಲೆ ಕುರಿತು ತಂದೆಯವರು ಬರೆದಿರುವ ಉತ್ತಮ ಲೇಖನಗಳನ್ನು ಪುಸ್ತಕ ಹೊಂದಿದೆ’ ಎಂದು ಮಾಲಾ ತಿಳಿಸಿದ್ದಾರೆ.

ಸಿಂಗ್‌ ಅವರು ಅಂದಿನ ಅವಿಭಜಿತ ಪಂಜಾಬ್‌ನಲ್ಲಿ 1915ರ ಆಗಸ್ಟ್‌ 15ರಂದು ಜನಿಸಿದ್ದರು. 2007ರಲ್ಲಿ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !