ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ: 475 ಸದಸ್ಯರು ಕೋಟ್ಯಧಿಪತಿಗಳು

Last Updated 27 ಮೇ 2019, 0:59 IST
ಅಕ್ಷರ ಗಾತ್ರ

ನವದೆಹಲಿ: 17ನೇ ಲೋಕಸಭೆಯಲ್ಲಿ ಒಟ್ಟಾರೆ 475 ಮಂದಿ ಕೋಟ್ಯಧಿಪತಿಗಳಿದ್ದು, ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್‌ ಅವರ ಪುತ್ರ ನಕುಲ್‌ ನಾಥ್ ಪಟ್ಟಿಯಲ್ಲಿ ಮೊದಲಿಗರು ಎಂದು ಅಸೋಸಿಯೇಷನ್ ಆಫ್‌ ಡೆಮಾಕ್ರಾಟಿಕ್‌ ರಿಫಾರ್ಮ್ಸ್ ವರದಿಯು ತಿಳಿಸಿದೆ.

539 ಮಂದಿ ನೂತನ ಸಂಸದರು ಸಲ್ಲಿಸಿರುವ ಪ್ರಮಾಣಪತ್ರದ ವಿವರಗಳನ್ನು ಪರಿಶೀಲಿಸಲಾಗಿದೆ. ಬಿಜೆಪಿಯ ಇಬ್ಬರು ಸೇರಿ ಮೂವರ ಮಾಹಿತಿ ಲಭ್ಯವಾಗಿಲ್ಲ ಎಂದು ಸಂಸ್ಥೆಯ ವರದಿ ತಿಳಿಸಿದೆ.

ಬಿಜೆಪಿಯ 301 ಸದಸ್ಯರ ಪೈಕಿ 265 ಮಂದಿ ಕೋಟ್ಯಧಿಪತಿಗಳು. ಎನ್‌ಡಿಎ ಮೈತ್ರಿಪಕ್ಷಗಳ 18 ಸದಸ್ಯರು ಕೋಟ್ಯಧಿಪತಿಗಳ ಸಾಲಿಗೆ ಸೇರಿದ್ದಾರೆ.

ಕಾಂಗ್ರೆಸ್‌ನ 51 ಸಂಸದರ ಪೈಕಿ 43 ಮಂದಿ ಕೋಟ್ಯಧಿಪತಿಗಳಿದ್ದಾರೆ. ಡಿಎಂಕೆಯ 22, ತೃಣಮೂಲ ಕಾಂಗ್ರೆಸ್‌ನ 20, ವೈಎಸ್‌ಆರ್ ಕಾಂಗ್ರೆಸ್‌ನ 19 ಸದಸ್ಯರು ಈ ಪಟ್ಟಿಯಲ್ಲಿದ್ದಾರೆ.

ಕಾಂಗ್ರೆಸ್ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನದಲ್ಲಿ ಚಿಂದ್ವಾರಾ ಕ್ಷೇತ್ರದ ನಕುಲ್‌ ನಾಥ್‌ (₹ 660 ಕೋಟಿ), ಕನ್ಯಾಕುಮಾರಿ ಕ್ಷೇತ್ರದ ಎಚ್.ವಸಂತಕುಮಾರ್, (₹ 417 ಕೋಟಿ) ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಡಿ.ಕೆ.ಸುರೇಶ್‌ (₹ 338 ಕೋಟಿ) ಸೇರಿದ್ದಾರೆ.

ನೂತನ ಸಂಸದರ ಸರಾಸರಿ ಆಸ್ತಿ ಮೊತ್ತ ₹ 20.93 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT