ಅಂತ್ಯೋದಯ, ಉದಯ್ ಎಕ್ಸ್‌ಪ್ರೆಸ್‌ ರೈಲುಗಳ ಸಂಖ್ಯೆ ಹೆಚ್ಚಳ

7
ಇಲಾಖೆಯಿಂದ ಹೊಸ ವೇಳಾಪಟ್ಟಿ ಬಿಡುಗಡೆ

ಅಂತ್ಯೋದಯ, ಉದಯ್ ಎಕ್ಸ್‌ಪ್ರೆಸ್‌ ರೈಲುಗಳ ಸಂಖ್ಯೆ ಹೆಚ್ಚಳ

Published:
Updated:

ನವದೆಹಲಿ: ಪ್ರಯಾಣಿಕರಿಗೆ ಒಳ್ಳೆಯ ಸುದ್ದಿ ನೀಡಲು ರೈಲ್ವೆ ಇಲಾಖೆ ಮುಂದಾಗಿದ್ದು, ಅಂತ್ಯೋದಯ ಎಕ್ಸ್‌ಪ್ರೆಸ್‌, ಉದಯ್ ಎಕ್ಸ್‌ಪ್ರೆಸ್, ತೇಜಸ್‌ ಎಕ್ಸ್‌ಪ್ರೆಸ್ ರೈಲುಗಳ ಸಂಖ್ಯೆ ಹೆಚ್ಚಿಸಲು ನಿರ್ಧರಿಸಿದೆ.

ಈ ನಿಟ್ಟಿನಲ್ಲಿ ಸಿದ್ಧಪಡಿಸಲಾಗಿರುವ ಹೊಸ ವೇಳಾಪಟ್ಟಿ ಬುಧವಾರ ಪ್ರಕಟಗೊಳ್ಳಲಿದೆ. ಇದರಿಂದಾಗಿ ಶೀಘ್ರವೇ ಈ ನೂತನ ರೈಲುಗಳು ಸಂಚಾರ ಆರಂಭಿಸುವ ನಿರೀಕ್ಷೆ ಇದೆ.

ದೇಶದ ಮೊದಲ ಸಂಪೂರ್ಣ ಹವಾನಿಯಂತ್ರಿತ ಮಧ್ಯಮವೇಗದ ಎರಡು ನೂತನ ತೇಜಸ್ ಎಕ್ಸ್‌ಪ್ರೆಸ್ ರೈಲುಗಳು, ಕಾಯ್ದಿರಿಸದ ಹಾಗೂ ಸಾಮಾನ್ಯ ಬೋಗಿಗಳನ್ನು ಹೊಂದಿರುವ ಅಂತ್ಯೋದಯ ಎಕ್ಸ್‌ಪ್ರೆಸ್‌, ಎರಡು ಹವಾನಿಯಂತ್ರಿತ ಡಬಲ್‌ ಡೆಕ್ಕರ್ ಉದಯ್ ಎಕ್ಸ್‌ಪ್ರೆಸ್‌ ರೈಲುಗಳು ಈ ನೂತನ ಪಟ್ಟಿಯಲ್ಲಿವೆ.

ಇದೇ ವೇಳೆ, ಸಾಂಪ್ರದಾಯಿಕ ಬೋಗಿಗಳನ್ನು ಬದಲಿಸಿ ಆಧುನಿಕ ಎಲ್‌ಎಚ್‌ಬಿ ಬೋಗಿಗಳನ್ನು ಅಳವಡಿಸುವ ಯೋಜನೆಯನ್ನು ಇಲಾಖೆ ಮುಂದುವರಿಸಲಿದ್ದು, 2019ರ ಮಾರ್ಚ್‌ 31ರ ಹೊತ್ತಿಗೆ 66 ಆಧುನಿಕ ಬೋಗಿಗಳನ್ನು ಅಳವಡಿಸುವ ಗುರಿ ಹೊಂದಿದೆ.

ಇಲಾಖೆಯು ಪ್ರಕಟಿಸುವ ‘ರೈಲುಗಳ ಸಂಕ್ಷಿಪ ವಿವರ’ದಲ್ಲಿ (ಟಿಎಜಿ) ಈ ಮಾಹಿತಿ ನೀಡಲಾಗಿದೆ. ರೈಲ್ವೆಯ ನೀತಿಗಳಲ್ಲಿ ಮಾಡಲಾಗಿರುವ ಬದಲಾವಣೆಗಳನ್ನು ಸಹ ಟಿಎಜಿಯಲ್ಲಿ ಉಲ್ಲೇಖಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !