ಬುಧವಾರ, ಏಪ್ರಿಲ್ 8, 2020
19 °C

ಭಾರತೀಯ ವಾಯುಪಡೆಗೆ ಸುಧಾರಿತ ಸುಖೊಯ್‌ ಯುದ್ಧವಿಮಾನ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮುಂಬೈ: ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ಮೊದಲ ಸುಧಾರಿತ ಸುಖೊಯ್‌–30 ಎಂಕೆಐ ಯುದ್ಧ ವಿಮಾನವು ಶುಕ್ರವಾರ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿತು. 

ಮಹಾರಾಷ್ಟ್ರದ ನಾಸಿಕ್‌ನ ಓಝಾರ್‌ ಜಿಲ್ಲೆಯಲ್ಲಿನ 11 ಬೇಸ್‌ ರಿಪೇರ್‌ ಡಿಪೊ (11 ಬಿಆರ್‌ಡಿ) ಘಟಕದಲ್ಲಿ ಇದನ್ನು ವಾಯುಪಡೆಗೆ ಹಸ್ತಾಂತರಿಸಲಾಯಿತು. ಘಟಕದ ನಿರ್ವಹಣಾ ಕಮಾಂಡರ್‌ ಏರ್‌ಮಾರ್ಷಲ್‌ ಹೇಮಂತ್‌ ಶರ್ಮಾ ಅವರು, ನೈರುತ್ಯ ಏರ್‌ಕಮಾಂಡರ್‌ ಏರ್‌ಮಾರ್ಷಲ್‌ ಎಚ್.ಎಸ್. ಅರೋರಾ ಅವರಿಗೆ ಇದನ್ನು ಹಸ್ತಾಂತರಿಸಿದರು. 

11 ಬಿಆರ್‌ಡಿ ಘಟಕವು ಮಿಗ್‌–29 ಮತ್ತು ಸುಖೊಯ್‌ 30ಎಂಕೆಐಯಂತಹ ಮುಂಚೂಣಿ ಯುದ್ಧವಿಮಾನಗಳನ್ನು ದುರಸ್ತಿಗೊಳಿಸುವ ಮತ್ತು ಅಭಿವೃದ್ಧಿಗೊಳಿಸುವ ಭಾರತೀಯ ವಾಯುಪಡೆಯ ಏಕೈಕ ಘಟಕವಾಗಿದೆ. ಸುಖೊಯ್‌ ಸು–30 ಎಂಕೆಐ ಯುದ್ಧವಿಮಾನವನ್ನು ರಷ್ಯಾದ ಸುಖೊಯ್‌ ಕಂಪನಿ ವಿನ್ಯಾಸಗೊಳಿಸಿದ್ದು, ಭಾರತದ ಎಚ್‌ಎಎಲ್‌ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಲಾಗಿದೆ.

1974ರ ಏಪ್ರಿಲ್‌ 11ರಂದು ಸ್ಥಾಪಿಸಲಾದ ಈ ಡಿಪೊಗೆ 1975ರ ಜನವರಿ 1ರಂದು ‘11 ಬೇಸ್‌ ರಿಪೇರ್‌ ಡಿಪೊ’ ಎಂದು ಮರುನಾಮಕರಣ ಮಾಡಲಾಯಿತು.

ತಂತ್ರಜ್ಞರು ಮತ್ತು ತಾಂತ್ರಿಕ ಸೌಕರ್ಯ ಅಭಿವೃದ್ಧಿಯಲ್ಲಿ ತೊಡಗಿರುವ ಈ ಘಟಕವು 1983ರಲ್ಲಿ 100 ಸು–7 ಯುದ್ಧವಿಮಾನವನ್ನು ಅಭಿವೃದ್ಧಿಪಡಿಸಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು