ಬೀಜದಿಂದ ಭತ್ತದ ತದ್ರೂಪಿ ಬೆಳೆ

7
ವಿಜ್ಞಾನಿಗಳ ಸಂಶೋಧನೆ

ಬೀಜದಿಂದ ಭತ್ತದ ತದ್ರೂಪಿ ಬೆಳೆ

Published:
Updated:

ಲಾಸ್ಏಂಜಲೀಸ್: ‌ಬೀಜದಿಂದ ಭತ್ತದ ಸಸಿಯ ತದ್ರೂಪಿಯನ್ನು ಸೃಷ್ಟಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಇವರಲ್ಲಿ ಭಾರತ ಸಂಜಾತರೂ ಇರುವುದು ವಿಶೇಷ. ಅಧಿಕ ಇಳುವರಿ ಮತ್ತು ರೋಗನಿರೋಧಕ ಶಕ್ತಿ ಹೊಂದಿರುವ ಈ ಭತ್ತ ಪ್ರಮುಖ ಸಂಶೋಧನೆಯಾಗಿ ಹೊರಹೊಮ್ಮಿದೆ.

ಭತ್ತವನ್ನೇ ಹೋಲುವ ತದ್ರೂಪಿಯ ಸೃಷ್ಟಿಯು ಕೃಷಿ ಪ್ರಪಂಚದ ದೊಡ್ಡ ಬೆಳವಣಿಗೆ ಎಂದು ಕ್ಯಾಲಿಫೋರ್ನಿಯಾ ಮತ್ತು ಅಮೆರಿಕದ ಡೆವಿಸ್‌ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ

ಪ್ರತಿ ವರ್ಷ ಅಧಿಕ ದರ ಹೈಬ್ರೀಡ್‌ ಬೀಜ ಕೊಳ್ಳುವ ಬದಲು ರೈತರು ತಮ್ಮದೇ ಹೈಬ್ರೀಡ್‌ ಸಸಿಗಳನ್ನು ಮರುನಾಟಿ ಮಾಡಬಹುದು. ಇದರಿಂದ ವರ್ಷ ಕಳೆದಂತೆ ಉತ್ತಮ ಇಳುವರಿ ಪಡೆಯಬಹುದು. ಹೈಬ್ರೀಡ್‌ ಬೀಜ ಹಲವರಿಗೆ ಭಾರಿ ಖರ್ಚಿನದು.

‘ಕೃಷಿಯನ್ನೇ ಬದಲಾಯಿಸುವ ಈ ಗುರಿ ಬೇಕಾಗಿದೆ’ ಎಂದು ಡೆವಿಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಲ ವೆಂಕಟೇಶನ್‌ ಸುಂದರೇಶನ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !