ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ: ಇಲಿ ಕಡಿತಕ್ಕೆ ಹಸುಳೆ ಬಲಿ

Last Updated 31 ಅಕ್ಟೋಬರ್ 2018, 5:32 IST
ಅಕ್ಷರ ಗಾತ್ರ

ಪಾಟ್ನಾ: ಬಿಹಾರದ ದರ್ಭಾಂಗ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಇಲಿಯ ಕಡಿತದಿಂದ ಒಂಭತ್ತು ದಿನದ ಹಸುಳೆಯೊಂದು ಮೃತಪಟ್ಟಿದೆ.

ಅನಾರೋಗ್ಯದ ಕಾರಣ ಶಿಶುವನ್ನು ದರ್ಭಾಂಗದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸೋಮವಾರ ದಾಖಲಿಸಲಾಗಿತ್ತು. ಈ ವೇಳೆ ಎನ್‌ಐಸಿಯುನಲ್ಲಿ ಇರಿಸಲಾಗಿತ್ತು. ಇಲಿಯ ಕಡಿತದಿಂದ ಮಂಗಳವಾರ ಬೆಳಿಗ್ಗೆ ಮಗು ಮೃತಪಟ್ಟಿದೆ. ಈ ಅನಾಹುತಕ್ಕೆ ಆಸ್ಪತ್ರೆಯ ನಿರ್ಲಕ್ಷ್ಯತನ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸೋಮವಾರ ತಡರಾತ್ರಿ ಮಗುವಿನ ಕಾಲು ಮತ್ತು ಕೈ ಅನ್ನು ಇಲಿಗಳು ಕಚ್ಚಿರುವುದು ತಿಳಿಯಿತು. ಈ ಸಮಯದಲ್ಲಿ ವೈದ್ಯರು ಮತ್ತು ನರ್ಸ್‌ಗಳು ಕರ್ತವ್ಯದಲ್ಲಿ ಇರಲಿಲ್ಲ. ಆಗ ತಕ್ಷಣವೇ ಆಸ್ಪತ್ರೆಯ ಅಧಿಕಾರಿಗಳಿಗೆ ತಿಳಿಸಿದೆವು. ಅಷ್ಟರಲ್ಲಿ ಮಗು ಮೃತಪಟ್ಟಿರುವ ಬಗ್ಗೆ ತಿಳಿಸಿದರು ಎಂದು ಶಿಶುವಿನ ತಂದೆ ಫುರನ್ ಚೌಪಾಲ್ ಹೇಳಿದರು.

ಆಸ್ಪತ್ರೆಗೆ ದಾಖಲಿಸುವಾಗಲೇ ಶಿಶುವಿನ ಸ್ಥಿತಿ ಗಂಭೀರವಾಗಿತ್ತು. ಇಲಿ ಕಚ್ಚಿರುವ ಬಗ್ಗೆ ಶಿಶುವಿನ ದೇಹದಲ್ಲಿ ಯಾವುದೇ ಗುರುತುಗಳಿಲ್ಲ ಎಂದು ಶಿಶು ವಿಭಾಗದ ಮುಖ್ಯಸ್ಥ ಹೇಳಿದ್ದಾರೆ.

ಈ ಆರೋಪವನ್ನು ಆಸ್ಪತ್ರೆಯ ಆಡಳಿತ ಮಂಡಳಿ ಅಲ್ಲಗಳೆದಿದೆ. ಈ ಬಗ್ಗೆ ತನಿಖೆ ಕೈಗೊಳ್ಳಲಾಗುವುದು ಎಂದು ಬಾಲಕನ ಕುಟುಂಬಕ್ಕೆ ಜಿಲ್ಲಾ ಆಡಳಿತ ಮಂಡಳಿ ಭರವಸೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT