ಪ್ರತ್ಯೇಕತಾವಾದಿ ನಾಯಕಿಯ ಆಸ್ತಿ ಜಪ್ತಿ

ಶುಕ್ರವಾರ, ಜೂಲೈ 19, 2019
24 °C

ಪ್ರತ್ಯೇಕತಾವಾದಿ ನಾಯಕಿಯ ಆಸ್ತಿ ಜಪ್ತಿ

Published:
Updated:

ನವದೆಹಲಿ: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕಿ ಅಸಿಯಾ ಅಂದ್ರಾಬಿ ಮನೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಜಪ್ತಿ ಮಾಡಿಕೊಂಡಿದೆ.

ಇದೇ ಮೊದಲ ಬಾರಿ ಪ್ರತ್ಯೇಕತಾವಾದಿ ನಾಯಕರ ವಿರುದ್ಧ ಈ ರೀತಿಯ ಕ್ರಮಕೈಗೊಳ್ಳಲಾಗಿದೆ. ನಿಷೇಧಿತ ದುಖ್ತರಣ್‌–ಇ–ಮಿಲ್ಲತ್‌ ಸಂಘನೆಯ ನಾಯಕಿ ಅಂದ್ರಾಬಿ ಮನೆ ಹೊರಗೆ ಜಪ್ತಿ ಆದೇಶವನ್ನು ಅಧಿಕಾರಿಗಳು ಅಂಟಿಸಿದ್ದಾರೆ.

ಶ್ರೀನಗರದ ಹೊರವಲಯದಲ್ಲಿರುವ ಈ ಮನೆಯನ್ನು ಭಯೋತ್ಪಾದನಾ ನಿಗ್ರಹ ಕಾನೂನು ಅಡಿಯಲ್ಲಿ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದೇಶ ಹೊರಡಿಸಿದ ಅಧಿಕಾರಿಯ ಅನುಮತಿ ಇಲ್ಲದೆಯೇ ಈ ಆಸ್ತಿಯನ್ನು ಮಾರಾಟ ಮಾಡಲು, ವರ್ಗಾಯಿಸಲು ಅವಕಾಶ ಇಲ್ಲ.

ಕಳೆದ ವರ್ಷ ನವೆಂಬರ್‌ನಲ್ಲಿ ಅಂದ್ರಾಬಿ ಮತ್ತು ಇಬ್ಬರು ಸಹಚರರ ವಿರುದ್ಧ ಎನ್‌ಐಎ ಆರೋಪಪಟ್ಟಿ ಸಲ್ಲಿಸಿತ್ತು.

ಸಾಮಾಜಿಕ ಜಾಲತಾಣಗಳ ಮೂಲಕ ಅಂದ್ರಾಬಿ, ಸೋಫಿ ಫೆಹ್ಮೀದಾ ಮತ್ತು ನಹೀದಾ ನಸ್ರೀನ್‌, ಭಾರತದ ವಿರುದ್ಧ ದ್ವೇಷದ ಸಂದೇಶಗಳನ್ನು ಬಿತ್ತರಿಸುತ್ತಿದ್ದರು ಎಂದು ಆರೋಪಿಸಲಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !