ಬ್ರಿಟನ್ ರಾಜಕೀಯ ಆಶ್ರಯಕ್ಕೆ ನೀರವ್‌ ಮೋದಿ ಯತ್ನ: ಕೇಂದ್ರಕ್ಕೆ ಮಾಹಿತಿ ಇಲ್ಲ

7

ಬ್ರಿಟನ್ ರಾಜಕೀಯ ಆಶ್ರಯಕ್ಕೆ ನೀರವ್‌ ಮೋದಿ ಯತ್ನ: ಕೇಂದ್ರಕ್ಕೆ ಮಾಹಿತಿ ಇಲ್ಲ

Published:
Updated:

ನವದೆಹಲಿ: ‘ಬ್ಯಾಂಕ್‌ಗೆ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರಾಭರಣ ಉದ್ಯಮಿ ನೀರವ್‌ ಮೋದಿ ಬ್ರಿಟನ್‌ನಲ್ಲಿ ರಾಜಕೀಯ ಆಶ್ರಯ ಪಡೆಯಲು ಪ್ರಯತ್ನಿಸುತ್ತಿರುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿಲ್ಲ’ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರಾಜಕೀಯ ಆಶ್ರಯ ನೀಡುವಂತೆ ನೀರವ್‌ ಬ್ರಿಟನ್‌ಗೆ ಕೋರಿಕೆ ಸಲ್ಲಿಸಿದ್ದಾರೆ. ಅಲ್ಲದೆ, ಕೆಲವು ವಾರಗಳ ಹಿಂದಷ್ಟೇ ಬ್ರಿಟನ್‌, ಫ್ರಾನ್ಸ್‌ ಮತ್ತು ಬೆಲ್ಜಿಯಂಗೆ ಅವರು ಭೇಟಿ ನೀಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹13 ಸಾವಿರ ಕೋಟಿ ವಂಚಿಸಿರುವ ಪ್ರಕರಣದಲ್ಲಿ ನೀರವ್‌, ಸಿಬಿಐಗೆ ಬೇಕಾಗಿರುವ ಪ್ರಮುಖ ಆರೋಪಿ. ನೀರವ್‌ ಮೋದಿ, ಅವರ ಸಹೋದರ ನಿಶಾಲ್‌ ಮೋದಿ ಹಾಗೂ ಅವರ ಕಂಪನಿ ಉದ್ಯೋಗಿ ಸುಭಾಷ್‌ ಪರಬ್‌ ವಿರುದ್ಧ ಸಿಬಿಐ ಕೋರಿಕೆಯಂತೆ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡಿದೆ.

ಸಿಬಿಐ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆ ನೀರವ್ ಮತ್ತು ಅವರ ಪತ್ನಿ, ಅವರ ಚಿಕ್ಕಪ್ಪ, ಸಹೋದರ ದೇಶ ತೊರೆದಿದ್ದಾರೆ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !