ನೀರವ್‌ ಕುಟುಂಬದ ವಿರುದ್ಧ ಕ್ರಮಕ್ಕೆ ಮುಂದಾದ ಸಿಬಿಐ

7

ನೀರವ್‌ ಕುಟುಂಬದ ವಿರುದ್ಧ ಕ್ರಮಕ್ಕೆ ಮುಂದಾದ ಸಿಬಿಐ

Published:
Updated:

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ₹13,000 ಕೋಟಿ ವಂಚಿಸಿದ ಪ್ರಕರಣದ ಆರೋಪಿ ನೀರವ್‌ ಮೋದಿಯ ಕುಟುಂಬದವರ ವಿರುದ್ಧ ಕ್ರಮಕ್ಕೆ ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಕೇಂದ್ರೀಯ ತನಿಖಾ ದಳ (ಸಿಬಿಐ) ಮುಂದಾಗಿವೆ. 

ನೀರವ್‌ ಮೋದಿ ಸಹೋದರಿ ಪೂರ್ವಿ ದೀಪಕ್‌ ಮೋದಿ ವಿರುದ್ಧ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡಿದೆ. ಮೋದಿ ಸಹೋದರ ನಿಶಾಲ್‌ ಮೋದಿ ಹಸ್ತಾಂತರಕ್ಕೆ ಸಿಬಿಐ, ಕೇಂದ್ರ ಗೃಹ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದೆ. 

ಪೂರ್ವಿ ಮೋದಿ ಹಾಗೂ ನಿಶಾಲ್‌ ಮೋದಿ ಅವರು ಸಹ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರನ್ನು ಆರೋಪಿಗಳು ಎಂದು ಪರಿಗಣಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.  ಹಣ ಅಕ್ರಮ ವರ್ಗಾವಣೆ ಪ್ರಕ್ರಿಯೆಯಲ್ಲಿ ಪೂರ್ವಿ ಮೋದಿ ಭಾಗಿಯಾಗಿದ್ದಾರೆ ಎಂದು ಇ.ಡಿ. ಹೇಳಿದೆ.

ಸಿಬಿಐ ಮನವಿ ಮೇರೆಗೆ ಬೆಲ್ಜಿಯಂನಲ್ಲಿರುವ ನಿಶಾಲ್‌ ಮೋದಿ ವಿರುದ್ಧ ರೆಡ್‌ ಕಾರ್ನರ್‌ ನೋಟಿಸು ಜಾರಿಯಾಗಿದೆ. ಅಲ್ಲಿಂದ ಭಾರತಕ್ಕೆ ಕರೆತರಲು ಸಿಬಿಐ ಮುಂದಾಗಿದೆ. ಈತನ ಹಸ್ತಾಂತರಕ್ಕೆ ಸಿಬಿಐ ಅರ್ಜಿ ಸಲ್ಲಿಸಿದ್ದು, ಗೃಹ ಸಚಿವಾಲಯವು ವಿದೇಶಾಂಗ ಸಚಿವಾಲಯದ ಮೂಲಕ ಅರ್ಜಿ ಕಳುಹಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !