ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಭಯಾ ಪ್ರಕರಣ: ಮಧ್ಯಾಹ್ನ 1 ಗಂಟೆಗೆ ತೀರ್ಪು ನೀಡಲಿದೆ ಸುಪ್ರೀಂ ಕೋರ್ಟ್

ಮರುಪರಿಶೀಲನಾ ಅರ್ಜಿ ವಿಚಾರಣೆ ಮುಕ್ತಾಯ
Last Updated 18 ಡಿಸೆಂಬರ್ 2019, 8:55 IST
ಅಕ್ಷರ ಗಾತ್ರ

ನವದೆಹಲಿ:ನಿರ್ಭಯಾ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣದ ಅಪರಾಧಿ ಅಕ್ಷಯ್‌ ಕುಮಾರ್ ಸಿಂಗ್‌ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯ ವಿಚಾರಣೆ ಮುಕ್ತಾಯಗೊಳಿಸಿರುವ ಸುಪ್ರೀಂ ಕೋರ್ಟ್‌ ಇಂದು ಮಧ್ಯಾಹ್ನ 1 ಗಂಟೆಗೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.

ನ್ಯಾಯಮೂರ್ತಿ ಆರ್.ಭಾನುಮತಿ, ಅಶೋಕ್ ಭೂಷಣ್ಮತ್ತು ಕನ್ನಡಿಗ ನ್ಯಾಯಮೂರ್ತಿ ಎಸ್.ಎ.ಬೋಪಣ್ಣ ಒಳಗೊಂಡನ್ಯಾಯಪೀಠ ಮರುಪರಿಶೀಲನಾಅರ್ಜಿಯ ವಿಚಾರಣೆ ನಡೆಸಿತು.

ಅಪರಾಧಿ ಅಕ್ಷಯ್ ಪರ ವಕೀಲ ಡಾ.ಎ.ಪಿ.ಸಿಂಗ್, ‘ಗಲ್ಲು ಶಿಕ್ಷೆಯಿಂದ ಅಪರಾಧಿಯನ್ನು ಕೊನೆಗೊಳಿಸಬಹುದೇ ವಿನಃ ಅಪರಾಧವನ್ನಲ್ಲ. ಮರಣ ದಂಡನೆಯು ಅಪರಾಧ ಚಟುವಟಿಕೆ ಮತ್ತು ಅಪರಾಧಿಗಳನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿಲ್ಲ’ ಎಂದು ವಾದ ಮಂಡಿಸಿದರು.

ಭಾರತದಲ್ಲಿ ಗರಿಷ್ಠ ಶಿಕ್ಷೆಯನ್ನು ರದ್ದುಪಡಿಸಬೇಕು. ನಿರ್ಭಯಾ ಪ್ರಕರಣದಲ್ಲಿ ಅಕ್ಷಯ್‌ನನ್ನು ತಪ್ಪಾಗಿ ಸಿಲುಕಿಸಲಾಗಿತ್ತು. ಆತನ ವಿರುದ್ಧ ನಕಲಿ ದಾಖಲೆ ಸೃಷ್ಟಿಸಲಾಗಿತ್ತು. ಅಲ್ಲದೆ, ಸಂತ್ರಸ್ತೆಯು ಮರಣ ಹೊಂದುವುದಕ್ಕೂ ಮುನ್ನ ನೀಡಿದ ಹೇಳಿಕೆಯಲ್ಲಿ ಅಕ್ಷಯ್‌ ಕುಮಾರ್ ಸಿಂಗ್ಹೆಸರು ಉಲ್ಲೇಖಿಸಿರಲಿಲ್ಲ. ಔಷಧಗಳ ಓವರ್‌ಡೋಸ್‌ನಿಂದಾಗಿ ಸಂತ್ರಸ್ತೆ ಮೃತಪಟ್ಟಿದ್ದರು ಎಂದು ಎ.ಪಿ.ಸಿಂಗ್ವಾದಿಸಿದರು.

ಪ್ರತಿವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಮಾನವೀಯತೆಗೆ ವಿರುದ್ಧವಾಗಿರುವ ಇಂತಹ ಪ್ರಕರಣಗಳಲ್ಲಿ ಕ್ಷಮೆ ನೀಡಲೇಬಾರದು. ಅಪರಾಧಿ ಪರ ವಕೀಲರು ಶಿಕ್ಷೆ ಜಾರಿಯಾಗುವುದನ್ನು ವಿಳಂಬಗೊಳಿಸಲು ಯತ್ನಿಸುತ್ತಿದ್ದಾರೆ. ಎಲ್ಲ ವಾದ–ಪ್ರತಿವಾದಗಳೂ ವಿಸ್ತೃತವಾಗಿ ನಡೆದಿವೆ. ಅಪರಾಧಿಗಳ ವಿರುದ್ಧ ಸಾಕ್ಷಿಗಳನ್ನು ಪರಿಗಣಿಸಿಯೇ ತೀರ್ಪು ನಿಡಲಾಗಿತ್ತು. ಅವುಗಳನ್ನು ಈ ಹಂತದಲ್ಲಿ ಮತ್ತೆ ಪ್ರಶ್ನಿಸಬಾರದು. ಈ ಪ್ರಕರಣಕ್ಕೆ ಯಾವುದೇ ಹೊಸ ಆಯಾಮಗಳಿಲ್ಲ’ ಎಂದು ಹೇಳಿದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT