ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಭಯಾ ಅತ್ಯಾಚಾರಿಗಳಿಗೆ ಶೀಘ್ರ ಗಲ್ಲು: ಹ್ಯಾಂಗ್‌ಮ್ಯಾನ್‌ಗೆ ಪೊಲೀಸರ ಹುಡುಕಾಟ

Last Updated 4 ಡಿಸೆಂಬರ್ 2019, 10:01 IST
ಅಕ್ಷರ ಗಾತ್ರ

ಪಾಟ್ನಾ: ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನುಇದೇ ತಿಂಗಳಲ್ಲಿ ಗಲ್ಲಿಗೇರಿಸುವ ಸಾಧ್ಯತೆಗಳಿದ್ದು, ಗಲ್ಲಿಗೇರಿಸುವ ವ್ಯಕ್ತಿ( ಹ್ಯಾಂಗ್‌ಮ್ಯಾನ್‌)ಯೇ ಇಲ್ಲ ಎಂದುತಿಹಾರ್‌ ಜೈಲಿನ ಉನ್ನತ ಮೂಲಗಳು ತಿಳಿಸಿವೆ.

ದಕ್ಷಿಣ ಏಷ್ಯಾದಲ್ಲೇದೊಡ್ಡ ಜೈಲಾಗಿರುವ ತಿಹಾರ್‌ನಲ್ಲಿ ಹ್ಯಾಂಗ್‌ಮ್ಯಾನ್‌ ಹುದ್ದೆ ಖಾಲಿ ಇದೆ ಎಂದು ಇತ್ತೀಚೆಗೆ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿತ್ತು. ಸಂಸತ್ ಮೇಲೆ ದಾಳಿ ನಡೆಸಿದ್ದಅಫ್ಜಲ್ ಗುರುವನ್ನು ನೇಣುಗಂಬಕ್ಕೆ ಹಾಕುವಾಗ ಹ್ಯಾಂಗ್‌ಮ್ಯಾನ್‌ಇಲ್ಲದೇ ಸಮಸ್ಯೆ ಎದುರಾಗಿತ್ತು. ಆಗಿನಿಂದಲೂ ಇಲ್ಲಿಯವರೆಗೂ ಹ್ಯಾಂಗ್‌ಮ್ಯಾನ್‌ ಹುದ್ದೆಯನ್ನು ಭರ್ತಿ ಮಾಡಲು ಸಾಧ್ಯವಾಗಿಲ್ಲ.

ತಿಹಾರ್‌ ಜೈಲಿನ ಹಿರಿಯ ಅಧಿಕಾರಿಗಳು ದೇಶದ ಇತರೆ ಜೈಲುಗಳಲ್ಲಿ ಹ್ಯಾಂಗ್‌ಮ್ಯಾನ್‌ ಇದ್ದಾರೆಯೇ ಎಂಬುದರ ಬಗ್ಗೆಪರಿಶೀಲನೆನಡೆಸುತ್ತಿದ್ದಾರೆ. ಹಾಗೇ ಉತ್ತರ ಪ್ರದೇಶದ ಕೆಲವು ಹಳ್ಳಿಗಳಲ್ಲಿ ಗಲ್ಲಿಗೇರಿಸುವ ವ್ಯಕ್ತಿಗಳ ಬಗ್ಗೆ ಪೊಲೀಸರುಹುಡುಕಾಡುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮರಣದಂಡಣೆ ಶಿಕ್ಷೆ ನೀಡುವುದು ಕಡಿಮೆಯಾಗುತ್ತಿದೆ. ಅತಿ ವಿರಳ ಪ್ರಕರಣಗಳಲ್ಲಿ ಮಾತ್ರ ಗಲ್ಲು ಶಿಕ್ಷೆ ನೀಡಲಾಗುತ್ತಿದೆ. ಆಗಾಗಿ ಪೂರ್ಣಕಾಲಿಕವಾಗಿ ಹ್ಯಾಂಗ್‌ಮ್ಯಾನ್‌ ಹುದ್ದೆಯನ್ನು ನೇಮಕಾತಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಹಾರ್ ಜೈಲಿನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನ್ಯಾಯಾಲಯ ಮರಣದಂಡನೆ ಕುರಿತು ಬ್ಲ್ಯಾಕ್ ವಾರಂಟ್ ಹೊರಡಿಸಿದ ನಂತರ ಆರೋಪಿಗಳನ್ನು ಅಧಿಕೃತವಾಗಿ ಗಲ್ಲಿಗೇರಿಸಲಾಗುತ್ತದೆ. ಅತ್ಯಾಚಾರ ಅಪರಾಧಿಗಳು ರಾಷ್ಟ್ರಪತಿ ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ಈ ಅರ್ಜಿ ತಿರಸ್ಕೃತಗೊಂಡರೇ ತಕ್ಷಣವೇ ವಾರಂಟ್ ಜಾರಿಯಾಗಲಿದ್ದು ಅಪರಾಧಿಗಳಿಗೆ ನೇಣು ಹಾಕಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT