ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಥನಾಲ್ ಬಳಕೆಗೆ ನೀತಿ ಆಯೋಗ ಉತ್ತೇಜನ

Last Updated 17 ಡಿಸೆಂಬರ್ 2018, 18:38 IST
ಅಕ್ಷರ ಗಾತ್ರ

ನವದೆಹಲಿ: ಶುದ್ಧ ಇಂಧನಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಮೆಥನಾಲ್ ಅನ್ನು ಗೃಹೋಪಯೋಗಿ ಹಾಗೂ ಸಾರಿಗೆ ಇಂಧನವಾಗಿ ಬಳಸುವಂತೆ ಉತ್ತೇಜಿಸಲು ನೀತಿ ಆಯೋಗ ಮುಂದಾಗಿದೆ.

ಈ ನಿಟ್ಟಿನಲ್ಲಿಸ್ವೀಡನ್‌ ಮೂಲದ ತಂತ್ರಜ್ಞಾನ ಬಳಸಿ, ಗೃಹೋಪಯೋಗಿ ಮೆಥನಾಲ್ ಸ್ಟೌ ಉತ್ಪಾದಿಸುವ ಘಟಕವನ್ನು ಬೆಂಗಳೂರು ಹಾಗೂ ಅಸ್ಸಾಂನಲ್ಲಿ ಸ್ಥಾಪಿಸಲಾಗುತ್ತದೆ ಎಂದು ನೀತಿ ಆಯೋಗದಸದಸ್ಯ ವಿ.ಕೆ. ಸಾರಸ್ವತ್ ತಿಳಿಸಿದ್ದಾರೆ.

ಸ್ಥಳೀಯವಾಗಿ ತಂತ್ರಜ್ಞಾನ ಅಭಿವೃದ್ಧಿಪಡಿಸುವ ತನಕ,ಕೈಗಾರಿಕಾ ಬಳಕೆಗಾಗಿ ದೊಡ್ಡ ಗಾತ್ರದ ಸ್ಟೌಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮೆಥನಾಲ್ ಇಂಧನ ಚಾಲಿತ 60 ಬಸ್‌ಗಳನ್ನುರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆಮದು ಮಾಡಿಕೊಳ್ಳಲಿದ್ದು,ಮುಂದಿನ 6 ತಿಂಗಳಲ್ಲಿ ಇವು ರಸ್ತೆಗೆ ಇಳಿಯಲಿವೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT