ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಎನ್‌ಪಿಆರ್ ಬಗ್ಗೆ ಪ್ರಶ್ನಿಸಿದ ನಿತೀಶ್

ನನಗೂ ನನ್ನ ತಾಯಿ ಹುಟ್ಟಿದ ದಿನಾಂಕ ಗೊತ್ತಿಲ್ಲ: ನಿತೀಶ್
Last Updated 29 ಜನವರಿ 2020, 20:00 IST
ಅಕ್ಷರ ಗಾತ್ರ

ಪಟ್ನಾ (ಬಿಹಾರ): ಕೇಂದ್ರ ಸರ್ಕಾರದಹೊಸ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ನಮೂನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಹೊಸ ಎನ್‌ಪಿಆರ್ ಬದಲಿಗೆ ಹಳೇ ಎನ್‌ಪಿಆರ್ ಅನ್ನು ಬಳಸುವಂತೆ ಕೋರಿದ್ದಾರೆ.

‘ಹೊಸ ಎನ್‌ಪಿಆರ್ ನಮೂನೆ ಹೆಚ್ಚು ಆತಂಕ ಮತ್ತು ಭಯವನ್ನು ಸೃಷ್ಟಿಸುತ್ತಿದೆ. ಪೋಷಕರ ಸ್ಥಳ, ಹುಟ್ಟಿದ ದಿನಾಂಕದಂಥ ಅನೇಕ ಕಾಲಂಗಳು ಅದರಲ್ಲಿವೆ. ಇದು ಅನಗತ್ಯ. ನೀವೇನಾದರೂ ನನ್ನನ್ನು ಕೇಳಿದರೆ, ನನಗೆ ನನ್ನ ತಾಯಿ ಹುಟ್ಟಿದ ದಿನಾಂಕವೂ ಗೊತ್ತಿಲ್ಲ. ಈ ಕಾಲಂಗಳು ಐಚ್ಛಿಕವಾಗಿರಬೇಕು. ಇದನ್ನು ಬೇಕಾದರೆ ಖಾಲಿ ಬಿಡಬಹುದು. ಆದರೆ, ಈ ರೀತಿ ಕಾಲಂ ಖಾಲಿ ಬಿಡುವುದರಿಂದ ಹೆಚ್ಚಿನ ಆತಂಕ, ಅನುಮಾನ ಮೂಡುತ್ತವೆ. ಅದಕ್ಕಾಗಿ ಹೊಸ ನಮೂನೆಯ ಬದಲಿಗೆ ಹಳೆ ಎನ್‌ಪಿಆರ್ ನಮೂನೆಯನ್ನೇ (2010–11) ಬಳಸಬೇಕೆಂದು ನಾನು ಕೇಂದ್ರಕ್ಕೆ ಮನವಿ ಮಾಡುತ್ತೇನೆ’ ಎಂದು ನಿತೀಶ್ ಹೇಳಿದ್ದಾರೆ.

ಬಿಹಾರದಲ್ಲಿ ಎನ್‌ಆರ್‌ಸಿ ಅನುಷ್ಠಾನಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿರುವ ನಿತೀಶ್, ಲೋಕಸಭೆ ಮತ್ತು ರಾಜ್ಯಸಭೆಯ ಜೆಡಿಯು ಸಂಸದರು ಎನ್‌ಪಿಆರ್ ಸಮಸ್ಯೆ ಕುರಿತು ಮೋದಿ ಸರ್ಕಾರದ ಗಮನ ಸೆಳೆಯಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT