ಬಿಹಾರ ಸಿ.ಎಂ ನಿತೀಶ್‌ ಕುಮಾರ್‌ಗಿಂತ ಮಗನೇ ಐದು ಪಟ್ಟು ಹೆಚ್ಚು ಶ್ರೀಮಂತ

7
ಸಚಿವರು, ಅಧಿಕಾರಿಗಳಿಂದ ಆಸ್ತಿ ವಿವರ ಘೋಷಣೆ

ಬಿಹಾರ ಸಿ.ಎಂ ನಿತೀಶ್‌ ಕುಮಾರ್‌ಗಿಂತ ಮಗನೇ ಐದು ಪಟ್ಟು ಹೆಚ್ಚು ಶ್ರೀಮಂತ

Published:
Updated:
Prajavani

ಪಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗಿಂತಲೂ ಮಗ ನಿಶಾಂತ್‌ ಅವರೇ ಐದು ಪಟ್ಟು ಹೆಚ್ಚು ಶ್ರೀಮಂತರೆಂದು ಘೋಷಿಸಿಕೊಂಡಿದ್ದಾರೆ.

1989ರಲ್ಲಿ ವಿ.ಪಿ.ಸಿಂಗ್‌ ಅವರ ರಾಷ್ಟ್ರೀಯ ಒಕ್ಕೂಟದಲ್ಲಿ ನಿತೀಶ್‌ ಕುಮಾರ್‌ ಮೊದಲ ಬಾರಿಗೆ ಕೇಂದ್ರ ಸಚಿವರಾಗಿದ್ದರು. ಇದಾದ ಬಳಿಕ, ಎನ್‌ಡಿಎ ಸರ್ಕಾರದಲ್ಲಿ ಕೇಂದ್ರದಲ್ಲಿ ಸಚಿವರಾಗಿದ್ದರು. 2005ರಿಂದ ಮುಖ್ಯಮಂತ್ರಿಯಾಗಿದ್ದಾರೆ.

ನಿತೀಶ್‌ ಅವರ ಬಳಿ ಈಗ  ₹16 ಲಕ್ಷ ಮೌಲ್ಯದ ಚರಾಸ್ತಿಯಿದ್ದು, ₹40,039 ನಗದು ಹೊಂದಿದ್ದಾರೆ. ಅದೇ ರೀತಿ ದೆಹಲಿಯ ದ್ವಾರಾಕದಲ್ಲಿ ಫ್ಲ್ಯಾಟ್‌ ಹೊಂದಿದ್ದು, ಇದರ ಮಾರುಕಟ್ಟೆ ಮೌಲ್ಯ ₹40 ಲಕ್ಷದಷ್ಟಿದೆ.

ನಿತೀಶ್‌ ಅವರ ಏಕೈಕ ಪುತ್ರ ನಿಶಾಂತ್‌, ಬಿಐಟಿ ಸಂಸ್ಥೆಯ ಎಂಜಿನಿಯರಿಂಗ್‌ ಪದವೀಧರ. ಅವರು ₹1.29 ಕೋಟಿ ಚರಾಸ್ತಿ ಹೊಂದಿದ್ದು, ₹1.48 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಒಟ್ಟಾರೆಯಾಗಿ ಇವರ ಆಸ್ತಿಯ ಒಟ್ಟು ಮೌಲ್ಯ ₹2.77 ಕೋಟಿ. ತಂದೆಯ ಆಸ್ತಿಗೆ ಹೋಲಿಸಿದರೆ, ಐದು ಪಟ್ಟು ಹೆಚ್ಚಾಗುತ್ತದೆ.

ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ವರ್ಷಾಂತ್ಯದ ಒಳಗಾಗಿ ಎಲ್ಲ ಮುಖ್ಯಮಂತ್ರಿ, ಸಂಪುಟ ಸಚಿವರು ಹಾಗೂ ಅಧಿಕಾರಿಗಳಿಗೆ ಆಸ್ತಿ ಘೋಷಣೆ ಮಾಡುವುದನ್ನು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಕಡ್ಡಾಯಗೊಳಿಸಿದ್ದರು. ಹೀಗಾಗಿ, ಕಳೆದ ವರ್ಷದ ಕೊನೆಯ ದಿನದಂದು ಸಾರ್ವಜನಿಕರಿಗೆ ಈ ಮಾಹಿತಿ ಲಭ್ಯವಾಗಿದೆ. 

ಸರ್ಕಾರದ ಹಿರಿಯ ಅಧಿಕಾರಿಗಳ ಪ್ರಕಾರ, ನಿತೀಶ್‌ ಕುಮಾರ್‌ ಅವರ ಪತ್ನಿ ಮಂಜು ಸಿನ್ಹಾ ಅವರು ಶಾಲಾ ಶಿಕ್ಷಕಿಯಾಗಿದ್ದರು. ಅನಾರೋಗ್ಯದಿಂದ ದಶಕದ ಹಿಂದೆ ಮೃತಪಟ್ಟಿದ್ದರು. ಮಂಜು ಅವರ ಹೆಸರಲ್ಲಿದ್ದ ಪಿಎಫ್‌, ಗ್ರಾಚ್ಯುಟಿ, ನಿವೃತ್ತಿಯ ನಂತರದ ಸೌಲಭ್ಯಗಳು ಮಗ ನಿಶಾಂತ್‌ಗೆ ವರ್ಗಾವಣೆಯಾಗಿದೆ. ಇದಲ್ಲದೇ, ಪಟ್ನಾ, ನಳಂದಾ, ಭಕ್ತಿಯಾರ್‌ಪುರದಲ್ಲಿ ನಿಶಾಂತ್‌ ಫ್ಲಾಟ್‌ ಹೊಂದಿದ್ದು, ಇದರ ಮೌಲ್ಯ ₹1ಕೋಟಿಯಷ್ಟಿದೆ.

ಸಿ.ಎಂಗಿಂತ ಸಚಿವರೇ ಶ್ರೀಮಂತರು: ಬಿಹಾರ ಸರ್ಕಾರದಲ್ಲಿ ನಿತೀಶ್‌ ಕುಮಾರ್‌ ಅವರಿಗಿಂತ ಅವರ ಸಚಿವರೇ ಹೆಚ್ಚಿನ ಶ್ರೀಮಂತರಾಗಿದ್ದಾರೆ. ಬಿಹಾರದ ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಅವರು ₹55.28 ಲಕ್ಷ ಬ್ಯಾಂಕ್‌ ಠೇವಣಿ ಹೊಂದಿದ್ದು, ₹46,600 ನಗದು ಹೊಂದಿದ್ದಾರೆ. 

 ಇದಲ್ಲದೇ, ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಅವರ ಕಿರಿಯ ಸಹೋದರ ಪಶುಪತಿ ಕುಮಾರ್‌ ಪರಾಸ್‌ ಕೂಡ ನಿತೀಸ್‌ ಸಂಪುಟದಲ್ಲಿ ಪಶುಸಂಗೋಪನೆ, ಮೀನುಗಾರಿಕಾ ಸಚಿವರಾಗಿದ್ದಾರೆ. ಇವರು ₹4.2 ಕೋಟಿ ಆಸ್ತಿ ಹೊಂದಿದ್ದು, ಶ್ರೀಮಂತ ರಾಜಕಾರಣಗಳಲ್ಲಿ ಒಬ್ಬರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !