ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಟೈನ್‌ಮೆಂಟ್ ಹಣೆಪಟ್ಟಿಯಿಂದ ಮುಕ್ತಿಪಡೆದ ದೆಹಲಿಯ 'ನಿಜಾಮುದ್ದೀನ್‌'

Last Updated 12 ಜೂನ್ 2020, 6:45 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನ ನಿಜಾಮುದ್ದೀನ್‌ ಪ್ರದೇಶ ಕಂಟೈನ್‌ಮೆಂಟ್ ಹಣೆಪಟ್ಟಿಯಿಂದ ಮುಕ್ತಿಪಡೆದಿದ್ದು ದೆಹಲಿ ಸರ್ಕಾರಲಾಕ್‌ಡೌನ್‌ ಅನ್ನು ಸಡಿಲಗೊಳಿಸಿದೆ.

ಸ್ಥಳೀಜಿಲ್ಲಾಡಳಿತ ಕಳೆದ ಮೂರು ದಿನಗಳ ಹಿಂದೆ 70 ದಿನಗಳ ಬಳಿಕನಿಜಾಮುದ್ದೀನ್‌ ಪ್ರದೇಶ ಕಂಟೈನ್‌ಮೆಂಟ್ ಪ್ರದೇಶವಲ್ಲ ಎಂದು
ಘೋಷಣೆ ಮಾಡುವ ಲಾಕ್‌ಡೌನ್‌ಸಡಿಲಗೊಳಿಸಿತು. ಆದರೂ ಕೊರೊನಾ ವೈರಸ್‌ ಭಯದಿಂದಾಗಿ ಸಹಜ ಸ್ಥಿತಿಗೆ ಮರಳಲು
ಸಾಧ್ಯವಾಗಿಲ್ಲ. ಲಾಕ್‌ಡೌನ್‌ ಕರಿನೆರಳು ಹಾಗೆಯೇ ಮುಂದುವರೆದಿದೆ.

ನಿಜಾಮುದ್ದೀನ್‌ ಪ್ರದೇಶದಲ್ಲಿ ಹಜಾರತ್ ದರ್ಗಾ ಹಾಗೂ ತಬ್ಲೀಗಿ ಜಮಾತ್‌ನ ಮರ್ಕಜ್‌ ಕಟ್ಟಡ ಪ್ರಮುಖವಾಗಿವೆ. ನಿತ್ಯ ಇಲ್ಲಿಗೆ ಸಾವಿರಾರು ಜನರು ಭೇಟಿ ನೀಡುವ ಪ್ರಮುಖ ಧಾರ್ಮಿಕ ಸ್ಥಳಗಳೂ ಹೌದು. ಲಾಕ್‌ಡೌನ್‌ ಸಡಿಲವಾಗಿದ್ದರೂ ದರ್ಗಾ ಸೇರಿದಂತೆ ಮರ್ಕಜ್‌ ಕಟ್ಟಡದ ಬಾಗಿಲು ತೆರಯಲಾಗಿಲ್ಲ. ಭದ್ರತಾ ಸಿಬ್ಬಂದಿಗಳ ಪಹರೆಯನ್ನು ಮುಂದುವರೆಸಲಾಗಿದ್ದು ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ.

ನಿಜಾಮುದ್ದೀನ್‌ ಪ್ರದೇಶದಲ್ಲಿ ಒಟ್ಟು 1080 ಕೊರೊನಾ ವೈರಸ್‌ ಪ್ರಕರಣಗಳು ಪತ್ತೆಯಾಗಿದ್ದವು. ಇವು ತಬ್ಲೀಗಿ ಜಮಾತ್ ನಂಟಿನಿಂದಾಗಿ ಸಕ್ರಿಯಗೊಂಡ ಪ್ರಕರಣಗಳು ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ತಿಳಿಸಿದ್ದಾರೆ. ಏಪ್ರಿಲ್‌ ತಿಂಗಳಲ್ಲಿ ಮುಂಜಾಗ್ರತ ಕ್ರಮವಾಗಿ ಮರ್ಕಜ್‌ ಕಟ್ಟಡದಿಂದ ಸುಮಾರು 2000 ಜನರನ್ನು ಸ್ಥಳಾಂತರ ಮಾಡಿ ಕ್ವಾರಂಟೈನ್‌ನಲ್ಲಿ ಇಡಲಾಗಿದ್ದರಿಂದ ಈ ಪ್ರದೇಶದಲ್ಲಿ ಸೋಂಕಿನ ಪ್ರಮಾಣ ತಗ್ಗಲು ಕಾರಣವಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ಹಜಾರತ್ ದರ್ಗಾ ಹಾಗೂ ತಬ್ಲೀಗಿ ಜಮಾತ್‌ನ ಮರ್ಕಜ್‌ ಕಟ್ಟಡದ ಸುತ್ತಮುತ್ತ ಸುಮಾರು 25 ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸ
ಮಾಡುತ್ತಿವೆ. ಇವರುಸಣ್ಣ ಪುಟ್ಟ ಅಂಗಡಿಗಳು, ಹೋಟೆಲ್‌ಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ದರ್ಗಾ ಮತ್ತು ಜಮಾತ್‌ಗೆ
ಬರುವ ಭಕ್ತರೇಇವರಿಗೆ ಆದಾಯದ ಪ್ರಮುಖ ಮೂಲವಾಗಿದೆ.

ಕಳೆದೊಂದು ವಾರದಿಂದ ಹೊಸ ಪ್ರಕರಣಗಳು ಪತ್ತೆಯಾಗದಿರುವುದರಿಂದ ಈ ಪ್ರದೇಶದಲ್ಲಿ ಲಾಕ್‌ಡೌನ್‌ ಸಡಿಲಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಆದರೂ ಜನರು ಕೊರೊನಾ ವೈರಸ್‌ ಭಯದಿಂದ ಮನೆಯಿಂದ ಹೊರ ಬರುತ್ತಿಲ್ಲ ಹಾಗೂ ಅಂಗಡಿಗಳನ್ನು ತೆರೆಯುತ್ತಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ದರ್ಗಾ ಹಾಗೂ ಮರ್ಕಜ್‌ ಅನ್ನು ಮುಚ್ಚಿರುವುದರಿಂದ ಭಕ್ತರೂಇತ್ತ ಸುಳಿಯುತ್ತಿಲ್ಲ, ಅಂಗಡಿಗಳನ್ನು ತರೆದರೂ ವ್ಯಾಪಾರ ನಡೆಯುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT