ಭಾರತೀಯರಿಗೆ ‘ಸ್ವಿಸ್‌’ ಬಾಗಿಲು ಬಂದ್‌

7

ಭಾರತೀಯರಿಗೆ ‘ಸ್ವಿಸ್‌’ ಬಾಗಿಲು ಬಂದ್‌

Published:
Updated:

ನವದೆಹಲಿ: ಸ್ವಿಟ್ಜರ್‌ಲ್ಯಾಂಡ್‌ನ (ಸ್ವಿಸ್‌) ಬ್ಯಾಂಕುಗಳಲ್ಲಿ ಭಾರತೀಯರು ಕಪ್ಪುಹಣ ಠೇವಣಿ ಇರಿಸಲು ಅವಕಾಶ ಕೊಡುವುದಿಲ್ಲ ಎಂದು ಭಾರತಕ್ಕೆ ಅಲ್ಲಿನ ಸರ್ಕಾರ ಭರವಸೆ ಕೊಟ್ಟಿದೆ. 

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರನ್ನು ಸ್ವಿಟ್ಜರ್‌ಲ್ಯಾಂಡ್‌ನ ವಿದೇಶಾಂಗ ಸಚಿವ ಇನ್ಯಾಚಿಯೊ ಕ್ಯಾಸಿಸ್‌ ಅವರು ದೆಹಲಿಯಲ್ಲಿ ಭೇಟಿಯಾಗಿ ಈ ಭರವಸೆ ನೀಡಿದ್ದಾರೆ. ತೆರಿಗೆ ತಪ್ಪಿಸುವವರನ್ನು ಪತ್ತೆ ಮಾಡುವುದಕ್ಕಾಗಿ ಸ್ವಿಸ್‌ ಬ್ಯಾಂಕುಗಳಲ್ಲಿನ ಠೇವಣಿದಾರರ ಮಾಹಿತಿ ವಿನಿಮಯಕ್ಕೆ ಯಾವೆಲ್ಲ ವ್ಯವಸ್ಥೆಗಳು ಇರಬೇಕು ಎಂಬ ಬಗ್ಗೆ ಅವರು ಚರ್ಚಿಸಿದರು. ಭಾರತೀಯರು ಸ್ವಿಸ್‌ ಬ್ಯಾಂಕುಗಳಲ್ಲಿ ಹೊಂದಿರುವ ಠೇವಣಿಗಳ ಮಾಹಿತಿ ವಿನಿಮಯಕ್ಕೆ ಸಂಬಂಧಿಸಿ ಭಾರತ ಮತ್ತು ಸ್ವಿಟ್ಜರ್‌ಲ್ಯಾಂಡ್‌ ನಡುವೆ ಕಳೆದ ವರ್ಷವೇ ಒಪ್ಪಂದ ಏರ್ಪಟ್ಟಿದೆ. 

ಭಾರತೀಯರ ಠೇವಣಿಯ ಬಗ್ಗೆ ಸ್ವಿಟ್ಜರ್‌ಲ್ಯಾಂಡ್‌ ಮುಂದಿನ ವರ್ಷದಿಂದ ಸಂಪೂರ್ಣ ಮಾಹಿತಿಯನ್ನು ಭಾರತಕ್ಕೆ ನೀಡಲಿದೆ. 

2017ರ ಡಿಸೆಂಬರ್‌ನಿಂದ 2018ರ ಡಿಸೆಂಬರ್‌ 31ರವರೆಗಿನ ಮಾಹಿತಿ ಮಾತ್ರ ಇದರಲ್ಲಿ ಇರಲಿದೆ. 2017ರ ಡಿಸೆಂಬರ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದು ಪೂರ್ವಾನ್ವಯ ಆಗುವುದಿಲ್ಲ. ಹಾಗಾಗಿ ಅದಕ್ಕೂ ಹಿಂದಿನ ಮಾಹಿತಿ ವಿನಿಮಯ ಸಾಧ್ಯವಿಲ್ಲ. 

ಸ್ವಿಟ್ಜರ್‌ಲ್ಯಾಂಡ್‌ನ ಬ್ಯಾಂಕುಗಳಲ್ಲಿ ಭಾರತೀಯರು ಇರಿಸಿರುವ ಠೇವಣಿ ಮೊತ್ತದ ಬಗ್ಗೆ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಇತ್ತೀಚೆಗಷ್ಟೇ ವಾಗ್ಯುದ್ಧ ನಡೆದಿದೆ. ಮುಂದಿನ ವರ್ಷದಿಂದ ಠೇವಣಿದಾರರ ಮಾಹಿತಿ ನೀಡಲಾಗುವುದು ಎಂದು ಅದೇ ಹೊತ್ತಿನಲ್ಲಿ ಸ್ವಿಸ್‌ ಸರ್ಕಾರ ಭರವಸೆ ಕೊಟ್ಟಿದೆ.

ಬರಹ ಇಷ್ಟವಾಯಿತೆ?

 • 20

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !