ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀ ಸ್ಕೂಲ್‌ ಮಕ್ಕಳಿಗೆ ಪರೀಕ್ಷೆ ನಡೆಸಬಾರದು: ಎನ್‌ಸಿಇಆರ್‌ಟಿ

Last Updated 14 ಅಕ್ಟೋಬರ್ 2019, 13:20 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರೀ ಸ್ಕೂಲ್‌ ಮಕ್ಕಳಿಗೆಯಾವುದೇ ಲಿಖಿತ ಅಥವಾ ಮೌಖಿಕ ಪರೀಕ್ಷೆ ನಡೆಸಬಾರದು’ ಎಂದು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ತಿಳಿಸಿದೆ.

ಇದು ಪೋಷಕರ ಆಕಾಂಕ್ಷೆಯಿಂದ ಬೆಳೆದಿರುವ ಹಾನಿಕಾರಕ ಮತ್ತು ಅನಪೇಕ್ಷಿತ ಅಭ್ಯಾಸ.ಪ್ರೀ ಸ್ಕೂಲ್‌ ಹಂತದಲ್ಲಿ ಮೌಲ್ಯಮಾಪನ ಉದ್ದೇಶವು ಮಗುವನ್ನು ಪಾಸ್‌ ಅಥವಾ ಫೇಲ್‌ ಎಂದು ಹಣೆಪಟ್ಟಿ ಅಂಟಿಸುವುದಲ್ಲ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.

ಪ್ರೀ ಸ್ಕೂಲ್‌ ಶಿಕ್ಷಣಕ್ಕಾಗಿಎನ್‌ಸಿಇಆರ್‌ಟಿ ಮಾರ್ಗಸೂಚಿ ಸಿದ್ಧಪಡಿಸಿದೆ. ಇದರಲ್ಲಿಮೌಲ್ಯಮಾಪವನ್ನು ಹೇಗೆ ವರದಿ ಮಾಡಬೇಕು?ಮಾಡಬೇಕಾದ ಮತ್ತು ಮಾಡಬಾರದ ಪಟ್ಟಿಯನ್ನು ತಿಳಿಸಲಾಗಿದೆ.

ಪ್ರಸ್ತುತ ಪ್ರೀ ಸ್ಕೂಲ್‌ನಲ್ಲಿ ಮಂದ ಮತ್ತು ಏಕತಾನತೆ ದಿನಚರಿ ಇದೆ. ಇದರಿಂದ ಮಕ್ಕಳು ಔಪಚಾರಿಕ ಶಿಕ್ಷಣಕ್ಕೆ ಒಡ್ಡಿಕೊಳ್ಳುತ್ತಾರೆ. ಪಠ್ಯಪುಸ್ತಕದ ಓದು ಮತ್ತು ಹೋಂವರ್ಕ್‌ ಮಾಡುವುದಕ್ಕಷ್ಟೆ ಆದ್ಯತೆ ನೀಡಲಾಗಿದೆ. ಈ ಮೂಲಕ ಮಕ್ಕಳ ಆಟವಾಡುವ ಹಕ್ಕನ್ನೇ ಕಸಿಯಲಾಗಿದೆ. ಇದೊಂದು ಅಪಾಯಕಾರಿ ಬೆಳವಣಿಗೆ ಎಂದು ಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ.

ಮಕ್ಕಳ ಸೃಜನಶೀಲತೆಯನ್ನು ಪ್ರೋತ್ಸಾಹಿಸಬೇಕು. ವಿಭಿನ್ನ ತಂತ್ರ ಮತ್ತು ವಿಧಾನಗಳ ಮೂಲಕ ಅವರ ಗ್ರಹಿಕಾ ಶಕ್ತಿ ವೃದ್ಧಿಸುವಂತಹ ಶಿಕ್ಷಣ ನೀಡಬೇಕು.ಮಕ್ಕಳು ಎಲ್ಲಿ ಹೇಗೆ ಹೆಚ್ಚು ಹೊತ್ತು ಕಳೆಯುತ್ತಾರೆ. ಅವರ ಸಾಮಾಜಿಕ ಸಂಬಂಧ, ಭಾಷೆಯ ಬಳಕೆಮತ್ತು ಮಕ್ಕಳ ಆರೋಗ್ಯ ಕುರಿತು ಶಿಕ್ಷಕರು ಗ್ರಹಿಸಿ ಸಂಕ್ಷಿಪ್ತ ಲಿಖಿತ ಟಿಪ್ಪಣಿಗಳನ್ನು ಸಿದ್ಧಪಡಿಸಬೇಕುಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ

ಪ್ರತಿ ಮಗುವಿನ ಮಾಹಿತಿ ಮಕ್ಕಳು ಮತ್ತು ಪೋಷಕರು ವೀಕ್ಷಿಸಲು ಲಭ್ಯವಿರಬೇಕು. ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ, ಪೋಷಕರು ಮಕ್ಕಳ ಲಿಖಿತ ಮತ್ತು ಮೌಖಿಕ ಪ್ರಗತಿಯ ಸಾರಂಶದ ವರದಿಯನ್ನು ಪಡೆಯಬೇಕು ಎಂದು ತಿಳಿಸಲಾಗಿದೆ.

ಪ್ರೀ ಸ್ಕೂಲ್‌ಸಿಬ್ಬಂದಿಗೆ ನೀಡಬೇಕಾದ ಮೂಲಸೌಕರ್ಯ, ಅರ್ಹತೆ ಮತ್ತು ಸಂಬಳವನ್ನು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಪ್ರವೇಶ ಪ್ರಕ್ರಿಯೆ, ದಾಖಲೆ ಮತ್ತು ವರದಿಗಳ ನಿರ್ವಹಣೆ ಜೊತೆಗೆ ಸಮುದಾಯದ ಮತ್ತು ಪೋಷಕರ ಜತೆಗಿನ ಸಮನ್ವಯತೆ ಪ್ರಾಮುಖ್ಯವನ್ನು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT