ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ತಡೆ

ಕೋವಿಡ್‌–19ನಿಂದ ಆರ್ಥಿಕ ಸಂಕಷ್ಟ: ಮುಂದಿನ ವರ್ಷ ಜೂನ್‌ವರೆಗೆ ಜಾರಿ
Last Updated 23 ಏಪ್ರಿಲ್ 2020, 20:07 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಬಿಕ್ಕಟ್ಟಿನಿಂದಾಗಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು 2021ರ ಜೂನ್‌ವರೆಗೆ ಹೆಚ್ಚಿಸದಿರಲು ಹಣಕಾಸು ಸಚಿವಾಲಯ ನಿರ್ಧರಿಸಿದೆ. ಇದರಿಂದ ₹37,530 ಕೋಟಿ ಉಳಿತಾಯವಾಗಲಿದೆ.

ಕೇಂದ್ರ ಸರ್ಕಾರದ 50 ಲಕ್ಷ ನೌಕರರು ಮತ್ತು 61 ಲಕ್ಷ ಪಿಂಚಣಿದಾರರಿಗೆ ಇದು ಅನ್ವಯವಾಗಲಿದೆ.

ಈ ವರ್ಷದ ಜನವರಿ 1ರಿಂದ ಅನ್ವಯವಾಗುವಂತೆಮಾರ್ಚ್‌ ತಿಂಗಳಲ್ಲಿ ಮಾಡಿದ್ದ ಶೇ 4ರಷ್ಟು ತುಟ್ಟಿ ಭತ್ಯೆ ಹೆಚ್ಚಳವೂ ರದ್ದಾಗಿದೆ. 2020ರ ಜನವರಿ 1ರಿಂದ ನೌಕರರ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರ ತುಟ್ಟಿ ಪರಿಹಾರದ (ಡಿಆರ್‌) ಹೆಚ್ಚುವರಿ ಕಂತುಗಳನ್ನು ನೀಡುವುದಿಲ್ಲ.ಸದ್ಯ ಜಾರಿಯಲ್ಲಿರುವ ಭತ್ಯೆಗಳು ಮುಂದುವರಿಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT