ಮಾನಸ ಸರೋವರದ ಪ್ರಶಾಂತತೆಯಲಿ ರಾಹುಲ್‌ ತಲ್ಲೀನ

7

ಮಾನಸ ಸರೋವರದ ಪ್ರಶಾಂತತೆಯಲಿ ರಾಹುಲ್‌ ತಲ್ಲೀನ

Published:
Updated:

ಕೈಲಾಸ ಮಾನಸ ಸರೋವರದ ಪ್ರಶಾಂತ ವಾತಾವರಣದ ಅನುಭವ ಪಡೆದಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಪುಣ್ಯ ಕ್ಷೇತ್ರದಲ್ಲಿ ಹಗೆತನವಿಲ್ಲ ಎಂದು ಬಣ್ಣಿಸಿದ್ದಾರೆ.

ಮಾನಸ ಸರೋವರದಲ್ಲಿನ ನೀರು ಪ್ರಶಾಂತ ಹಾಗೂ ಸೌಮ್ಯ. ಸರೋವರ ಎಲ್ಲವನ್ನೂ ನೀಡುತ್ತದೆ ಹಾಗೂ ಏನನ್ನು ಕಳೆದುಕೊಳ್ಳುವುದಿಲ್ಲ. ಯಾರು ಬೇಕಾದರೂ ಅಲ್ಲಿಂದ ನೀರು ಕುಡಿಯಬಹುದು. ಇಲ್ಲಿ ಎಲ್ಲಿಯೂ ಹಗೆತನಗಳಿಲ್ಲ. ಹಾಗಾಗಿಯೇ ಭಾರತದಲ್ಲಿ ನಾವು ಈ ಜಲವನ್ನು ಪೂಜಿಸುತ್ತೇವೆ’ ಎಂದು ರಾಹುಲ್‌ ಗಾಂಧಿ ಟ್ವೀಟಿಸಿದ್ದಾರೆ.

ಮಾನಸ ಸರೋವರ ಮತ್ತು ಕೈಲಾಸ ಪರ್ವತದ ಚಿತ್ರಗಳನ್ನು ಪ್ರಕಟಿಸಿರುವ ಅವರು, ‘ಕೈಲಾಸ ಕರೆದಾಗಲೇ ವ್ಯಕ್ತಿಯೊಬ್ಬ ಅಲ್ಲಿಗೆ ಹೋಗುತ್ತಾನೆ. ನನಗೆ ಅಂತ ಅವಕಾಶ ದೊರೆತಿರುವುದಕ್ಕೆ ಸಂತಸಗೊಂಡಿದ್ದೇನೆ ಹಾಗೂ ಈ ರಮಣೀಯ ಸೌಂದರ್ಯದ ಪಯಣದಲ್ಲಿ ಕಂಡದ್ದನ್ನು ಹಂಚಿಕೊಳ್ಳಲು ಸಾಧ್ಯವಾಗಿದೆ’ ಎಂದು ಬರೆದುಕೊಂಡಿದ್ದಾರೆ. 

ರಾಹುಲ್‌ ಗಾಂಧಿ ಆಗಸ್ಟ್‌ 31ರಂದು ಮಾನಸ ಸರೋವರ ಯಾತ್ರೆ ಪ್ರಾರಂಭಿಸಿದ್ದರು.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !