ಬಿಹಾರದಲ್ಲಿ ಹಿಂದೆ ಸರಿದ ಹಿಂದುತ್ವ

ಶನಿವಾರ, ಏಪ್ರಿಲ್ 20, 2019
29 °C

ಬಿಹಾರದಲ್ಲಿ ಹಿಂದೆ ಸರಿದ ಹಿಂದುತ್ವ

Published:
Updated:

ಪಟ್ನಾ: ರಾಜ್ಯದಲ್ಲಿ ಎನ್‌ಡಿಎ ಮಿತ್ರಪಕ್ಷಗಳು ತೀವ್ರವಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದರೂ ಇಲ್ಲಿ ಬಿಜೆಪಿಯು ಹಿಂದುತ್ವದ ವಿಚಾರವನ್ನು ಅಷ್ಟಾಗಿ ಮುನ್ನೆಲೆಗೆ ತರುತ್ತಿಲ್ಲ.

ಬಿಹಾರದಲ್ಲಿ ಎನ್‌ಡಿಎಯ ಪ್ರಮುಖ ಪಾಲುದಾರರಾಗಿರುವ ನಿತೀಶ್‌ ಕುಮಾರ್‌ ಅವರು ಸೋಮವಾರ ಚುನಾವಣಾ ರ್‍ಯಾಲಿಯೊಂದರಲ್ಲಿ ಅಭಿವೃದ್ಧಿಯ ಮಾತುಗಳನ್ನು ಮಾತ್ರ ಆಡಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡುವುದು, ಸ್ಥಳೀಯ ಸಂಸ್ಥೆಗಳಲ್ಲಿ ಮತ್ತು ಉದ್ಯೋಗದಲ್ಲಿ ಮಹಿಳೆಯರಿಗೆ ಶೇ 35ರಷ್ಟು ಮೀಸಲಾತಿ ವಿಚಾರಗಳನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.

ಹೀಗಿದ್ದರೂ ಮುಸ್ಲಿಮರು ಎನ್‌ಡಿಎಗೆ ಮತ ನೀಡುವ ಸಾಧ್ಯತೆಗಳಿಲ್ಲ ಎನ್ನಲಾಗುತ್ತಿದೆ. ‘ನಿತೀಶ್‌ ವಿರುದ್ಧ ನಮಗೆ ವೈರತ್ವವಿಲ್ಲ, ಆದರೆ ಎನ್‌ಡಿಎ ಅಭ್ಯರ್ಥಿಗಳಿಗೆ ಮತವಿಲ್ಲ’ ಎಂಬ ನಿಲುವನ್ನು ಅವರು ತಳೆದಿದ್ದಾರೆ.

2015ರಲ್ಲಿ ನಿತೀಶ್‌ ಬಿಜೆಪಿಯಿಂದ ದೂರವಾದಾಗ ಮುಸ್ಲಿಮರು ಅವರನ್ನು ಬೆಂಬಲಿಸಿದ್ದರು. ಆದರೆ ನಂತರ ಮತ್ತೆ ಅವರು ಬಿಜೆಪಿ ಜೊತೆ ಕೈಜೋಡಿಸಿದ್ದರಿಂದ ಅವರಿಂದ ಈ ಸಮುದಾಯ ದೂರ ಸರಿದಿದೆ.

ರಾಜ್ಯದಲ್ಲಿ ಆರ್‌ಜೆಡಿಯೇ ಪ್ರಧಾನ ಪಾಲುದಾರ ಪಕ್ಷವಾಗಿರುವುದರಿಂದ ನಿತೀಶ್‌ ಅವರ ಹಾದಿಯಲ್ಲೇ ಚಿಂತನೆ ನಡೆಸುವುದು ಬಿಜೆಪಿಗೆ ಅನಿವಾರ್ಯವಾಗುತ್ತಿದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !