ಎನ್‌ಆರ್‌ಐಗೆ ಆನ್‌ಲೈನ್‌ ಮತಹಕ್ಕು ಇಲ್ಲ: ಆಯೋಗ

ಭಾನುವಾರ, ಮೇ 26, 2019
31 °C
ಚುನಾವಣಾ ಆಯೋಗ ಸ್ಪಷ್ಟನೆ

ಎನ್‌ಆರ್‌ಐಗೆ ಆನ್‌ಲೈನ್‌ ಮತಹಕ್ಕು ಇಲ್ಲ: ಆಯೋಗ

Published:
Updated:
Prajavani

ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಆನ್‌ಲೈನ್‌ನಲ್ಲಿ ಮತದಾನ ಮಾಡಲು ಅವಕಾಶ ಇಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ಸ್ಪಷ್ಟಪಡಿಸಿದೆ. ಈ ಸಂಬಂಧ ಹರಡುತ್ತಿರುವ ಸುಳ್ಳು ಸುದ್ದಿಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಗೆ ದೂರು ನೀಡಿದೆ.

‘ಆನ್‌ಲೈನ್‌ನಲ್ಲಿ ಮತದಾನ ಮಾಡಲು ಅವಕಾಶವಿದೆ ಎಂಬ ಸುದ್ದಿಗಳ ಜತೆ ಆಯೋಗದ ಲಾಂಛನವನ್ನು ಬಳಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಡಿ ಜನರನ್ನು ತಪ್ಪುದಾರಿಗೆಳೆಯಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಆಯೋಗ ಹೇಳಿದೆ.

‘ಅನಿವಾಸಿ ಭಾರತೀಯರಿಗೆ ಈವರೆಗೆ ಇಂತಹ ಯಾವುದೇ ಸೌಲಭ್ಯವನ್ನು ಇನ್ನೂ ನೀಡಿಲ್ಲ’ ಎಂದು ಚುನಾವಣಾ ಆಯೋಗದ ವಕ್ತಾರರೊಬ್ಬರು ಹೇಳಿದ್ದಾರೆ.

‘ಒಂದು ವೇಳೆ ಎನ್‌ಆರ್ ಐಗಳಿಗೆ ಆನ್‌ಲೈನ್‌ ಮತದ ಹಕ್ಕು ನೀಡಬೇಕಾದರೆ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಬೇಕಿದೆ’ ಎಂದು ಅವರು ತಿಳಿಸಿದ್ದಾರೆ.

ಸದ್ಯ ಮತದಾನ ಮಾಡಬಯಸುವ ಎನ್‌ಆರ್‌ಐಗಳು ಮತದಾರನೆಂದು ನೋಂದಣಿ ಮಾಡಿಸಿಕೊಳ್ಳಬೇಕು. ನಂತರ ಭಾರತಕ್ಕೆ ಬಂದು ತಮ್ಮ ಕ್ಷೇತ್ರದ ಮತಗಟ್ಟೆಯಲ್ಲಿ ಪಾಸ್‌ಪೋರ್ಟ್‌ ಅನ್ನು ದಾಖಲೆಯಾಗಿ ನೀಡಿ ಮತ ಚಲಾಯಿಸಬಹುದು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !