ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಕಡಿತದ ಪ್ರಸ್ತಾವ ಇಲ್ಲ: ರೈಲ್ವೆ ಸ್ಪಷ್ಟನೆ

Last Updated 30 ಜುಲೈ 2019, 17:36 IST
ಅಕ್ಷರ ಗಾತ್ರ

ನವದೆಹಲಿ: ‘ರೈಲ್ವೆಯಲ್ಲಿ ಉದ್ಯೋಗ ಕಡಿತ ಮಾಡುವ ಯೋಚನೆ ಇಲ್ಲ’ ಎಂದು ರೈಲ್ವೆ ಇಲಾಖೆ ಮಂಗಳವಾರ ಸ್ಪಷ್ಟಪಡಿಸಿದೆ.

30 ವರ್ಷಗಳಷ್ಟು ಕೆಲಸಪೂರೈಸಿರುವ, 55 ವರ್ಷಕ್ಕೂ ಹೆಚ್ಚಿನ ವಯಸ್ಸಿನ ಸಿಬ್ಬಂದಿಯ ವಿವರಗಳನ್ನು ನೀಡುವಂತೆ ಇಲಾಖೆಯು ಎಲ್ಲಾ ವಲಯ ಕಚೇರಿಗಳಿಗೆ ಈಚೆಗೆ ಸೂಚನೆ ನೀಡಿತ್ತು. ಇದರ ಬೆನ್ನಲ್ಲೆ, ‘ಇಲಾಖೆಯು ಉದ್ಯೋಗಗಳನ್ನು ಕಡಿತ ಮಾಡಲಿದೆ’ ಎಂಬ ವದಂತಿಗಳು ಹಬ್ಬಿದ್ದವು.

ಇದಕ್ಕೆ ಮಂಗಳವಾರ ಸ್ಪಷ್ಟನೆ ನೀಡಿದ ಇಲಾಖೆ, ‘ಸಿಬ್ಬಂದಿಯ ಕಾರ್ಯನಿರ್ವಹಣೆಯ ಪರಿಶೀಲನೆ ನಡೆಸಲು ಇಲಾಖೆ ನಡೆಸುವ ಸಹಜ ಪ್ರಕ್ರಿಯೆ ಇದು. ಸಾರ್ವಜನಿಕ ಹಿತದ ದೃಷ್ಟಿಯಿಂದ ಈ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಈ ಹಿಂದೆಯೂ ನಡೆಸಲಾಗಿತ್ತು’ ಎಂದಿದೆ.

ಇಲಾಖೆಯು ಜುಲೈ 27ರಂದು ವಲಯ ಕಚೇರಿಗಳಿಗೆ ಕಳುಹಿಸಿದ್ದ ಪತ್ರದಲ್ಲಿ ‘ಅದಕ್ಷ’ ಸಿಬ್ಬಂದಿಯ ಪಟ್ಟಿ ತಯಾರಿಸಿ ಆಗಸ್ಟ್‌ 9ರೊಳಗೆ ಮುಖ್ಯ ಕಚೇರಿಗೆ ಕಳುಹಿಸಿಕೊಡುವಂತೆ ಸೂಚಿಸಲಾಗಿತ್ತು.

ಕಳೆದ ಹಲವು ವರ್ಷಗಳಿಂದ ರೈಲ್ವೆ ಇಲಾಖೆಯು ಕಳಪೆ ನಿರ್ವಹಣಾ ಸಾಮರ್ಥ್ಯವನ್ನು ತೋರುತ್ತಿದೆ. ಮೋದಿ ನೇತೃತ್ವದ ಹಿಂದಿನ ಸರ್ಕಾರದ ಕೊನೆಯ ಮೂರು ವರ್ಷಗಳಲ್ಲಿ ಸಂಸ್ಥೆಯ ಸರಾಸರಿ ಕಾರ್ಯಾಚರಣೆ ಅನುಪಾತವು ಶೇ 95ಕ್ಕೆ ಏರಿತ್ತು. 2017–18ರಲ್ಲಿ ಅದು ಗರಿಷ್ಠ ಶೇ 98.4ಕ್ಕೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT