ಶುಕ್ರವಾರ, ನವೆಂಬರ್ 15, 2019
23 °C

ಜನಪ್ರಿಯ ಘೋಷಣೆಗಳನ್ನು ಕೈಬಿಟ್ಟ ಬಿಜೆಪಿ 

Published:
Updated:

ಚಂಡೀಗಡ: ಹರಿಯಾಣ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಬಿಜೆಪಿ ಈ ಬಾರಿ ಯಾವುದೇ ‘ಜನಪ್ರಿಯ ಯೋಜನೆ’ಗಳನ್ನು ಘೋಷಿಸಿಲ್ಲ.

ಈಗಾಗಲೇ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್‌ ಹಾಗೂ ಐಎನ್‌ಎಲ್‌ಡಿ ಪಕ್ಷಗಳು ರೈತರು, ಯುವಕರು ಹಾಗೂ ಹಿರಿಯ ನಾಗರಿಕರನ್ನು ಆಕರ್ಷಿಸಲು ಅನೇಕ ನಗದು ಯೋಜನೆಗಳನ್ನು ಘೋಷಿಸಿವೆ.

ಬಿಜೆಪಿ ಪ್ರಣಾಳಿಕೆ ಮುಖ್ಯಾಂಶ

* ಮುಂದಿನ ಐದು ವರ್ಷಗಳಲ್ಲಿ 25 ಲಕ್ಷ ಯುವಕರಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡಲು ₹ 500 ಕೋಟಿ ಮೀಸಲು

* ಯಾವುದೇ ಅಡಮಾನ ಪಡೆಯದೆಯೇ ಅರ್ಹರಿಗೆ ಶಿಕ್ಷಣ ಸಾಲ ಸೌಲಭ್ಯ

* 2,000 ಆರೋಗ್ಯ ಕೇಂದ್ರಗಳ ಸ್ಥಾಪನೆ. ರಾಜ್ಯದ ಎಲ್ಲಾ ನಗರಗಳಿಗೂ ‘ಸ್ಮಾರ್ಟ್‌ ಸಿಟಿ’ ಸೌಲಭ್ಯ ವಿಸ್ತರಣೆ

* 5 ಎಕರೆಗೂ ಕಡಿಮೆ ಕೃಷಿಭೂಮಿ ಹೊಂದಿರುವ ರೈತರಿಗೆ ಮಾಸಿಕ ₹ 3,000 ಪಿಂಚಣಿ ಮತ್ತು ₹ 3 ಲಕ್ಷದವರೆಗೆ ಬಡ್ಡಿರಹಿತ ಕೃಷಿಸಾಲ

* ರೈತರ ಅಭಿವೃದ್ಧಿಗೆ ನೆರವಾಗುವ ವಿವಿಧ ಯೋಜನೆಗಳಿಗಾಗಿ ₹ 1,000 ಕೋಟಿ ಮೀಸಲು

* ಪ್ರತಿ ಗ್ರಾಮದಲ್ಲಿ ಒಂದು ಕ್ರೀಡಾಂಗಣ, ಉದ್ಯೋಗಸ್ಥ ಮಹಿಳೆಯರಿಗಾಗಿ ಪ್ರತಿ ಜಿಲ್ಲೆಯಲ್ಲಿ ಹಾಸ್ಟೆಲ್‌ ನಿರ್ಮಾಣ. ಮಹಿಳೆಯರಿಗಾಗಿ ವಿಶೇಷ ಬಸ್‌ ಸೌಲಭ್ಯ

* 2025ರ ವೇಳೆಗೆ ರಾಜ್ಯವನ್ನು ಕ್ಷಯ ಮತ್ತು ಅಪೌಷ್ಟಿಕತೆಯಿಂದ ಮುಕ್ತಗೊಳಿಸುವುದು

ಪ್ರತಿಕ್ರಿಯಿಸಿ (+)