ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಣಗುಡುತ್ತಿರುವ 27 ವಿಮಾನ ನಿಲ್ದಾಣಗಳು

ನಿರ್ವಹಣೆಗೆ ₹2.5 ಕೋಟಿ ವೆಚ್ಚ; ಎಎಐ
Last Updated 13 ಡಿಸೆಂಬರ್ 2018, 11:39 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ 27 ವಿಮಾನ ನಿಲ್ದಾಣಗಳಲ್ಲಿ ಯಾವುದೇ ವಿಮಾನಗಳು ಟೇಕಾಫ್‌ ಅಥವಾ ಲ್ಯಾಂಡಿಂಗ್‌ ಮಾಡುತ್ತಿಲ್ಲ, ಆದರೆ ಇವುಗಳ ನಿರ್ವಹಣೆಗಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಎಎಐ) 2017–18ರಲ್ಲಿ ₹2.5 ಕೋಟಿ ವ್ಯಯಿಸಿದೆ.

’ಬೇಡಿಕೆಗೆ ಅನುಗುಣವಾಗಿ ಏರ್‌ಸ್ಟ್ರಿಪ್‌ ಅಥವಾ ವಿಮಾನನಿಲ್ದಾಣಗಳನ್ನು ಪುನಶ್ಚೇತನಗೊಳಿಸುವ ಆಲೋಚನೆ ಇದೆ. ಇದಕ್ಕೆ ರಾಜ್ಯ ಸರ್ಕಾರ ಹಾಗೂ ವಿಮಾನಯಾನ ಸಂಸ್ಥೆಗಳು ಕೆಲವೊಂದು ವಿನಾಯಿತಿಗಳನ್ನು ನೀಡಿದರೆ ಮಾತ್ರ ಸಾಧ್ಯ‘ ಎಂದು ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್‌ ಸಿನ್ಹಾ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದರು.

’ಪ್ರಾದೇಶಿಕ ಸಂಪರ್ಕ ಯೋಜನೆ ಅಡಿಯಲ್ಲಿ ಇಂತಹ ವಿಮಾನನಿಲ್ದಾಣಗಳಲ್ಲಿ ಸೌಲಭ್ಯ, ಪುನಶ್ಚೇತನ ನೀಡಲು ಹೆಚ್ಚಿನ ಒತ್ತು ನೀಡಲಾಗುತ್ತಿದ್ದು,ಉಡಾನ್‌ ಯೋಜನೆಯಂತೆ ಈ ಭಾಗಗಳಿಗೂ ವಿಮಾನಯಾನ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುವುದು‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT