ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಬಾಲಕನ ಗುಪ್ತಾಂಗ ಸುಟ್ಟ ಮಹಿಳೆ

7

ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಬಾಲಕನ ಗುಪ್ತಾಂಗ ಸುಟ್ಟ ಮಹಿಳೆ

Published:
Updated:

ನೊಯ್ಡಾ: ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ವಿವಾಹಿತ ಮಹಿಳೆಯೊಬ್ಬಳು 13ರ ಬಾಲಕನ ಗುಪ್ತಾಂಗವನ್ನೇ ಸುಟ್ಟ ಘಟನೆ ದೆಹಲಿ ಸಮೀಪ ಗ್ರೇಟರ್ ನೊಯ್ಡಾದಲ್ಲಿ ಕಳೆದ ಶಕ್ರವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮಹಿಳೆಯ ವಿರುದ್ಧ ಸಂತ್ರಸ್ತ ಬಾಲಕನ ತಾಯಿ ಮಂಗಳವಾರ ದೂರು ನೀಡಿದ್ದು, ಇದರ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಕಾಯ್ದೆ (ಪೊಕ್ಸೊ), ಅಪಹರಣ ಮತ್ತು ಅಪರಾಧ ಕೃತ್ಯ ಸೇರಿದಂತೆ ಹಲವು ಸೆಕ್ಷನ್‌ಗಳ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಮಹಿಳೆ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಡೆದಿದ್ದೇನು?: ಗ್ರೇಟರ್ ನೊಯ್ಡಾದ ಚಪ್ರೌಲಾ ಗ್ರಾಮದ 20 ವರ್ಷ ವಯಸ್ಸಿನ ಮಹಿಳೆ ನೆರೆ ಮನೆಯ ಬಾಲಕನನ್ನು ಮನೆಗೆ ಕರೆದಿದ್ದಾಳೆ. ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾಳೆ. ಬಾಲಕ ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಆಕೆ ಕಾದ ಇಕ್ಕುಳದಿಂದ ಆತನ ಗುಪ್ತಾಂಗವನ್ನು ಸುಟ್ಟಿದ್ದಾಳೆ ಎಂದು ಬಾಲಕನ ತಾಯಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

‘ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಪೊಲೀಸರಿಗೆ ದೂರು ನೀಡುವಾಗ ತಡಮಾಡಿದ್ದೂ ಸಹ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 2

  Sad
 • 2

  Frustrated
 • 11

  Angry

Comments:

0 comments

Write the first review for this !