ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ 2.0: ಹೊರ ಬಂದು ಉಗುಳಿದ್ರೆ, ಮಾಸ್ಕ್ ಹಾಕದಿದ್ರೆ ಕೇಸು

Last Updated 15 ಏಪ್ರಿಲ್ 2020, 11:59 IST
ಅಕ್ಷರ ಗಾತ್ರ

ಬೆಂಗಳೂರು: ಎರಡನೇ ಹಂತದ ಲಾಕ್‌ಡೌನ್‌ನಲ್ಲಿ ದೇಶದ ನಾಗರಿಕರು ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತನೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಬುಧವಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಹೇಳಿದೆ.

21 ದಿನಗಳು ಲಾಕ್‌ಡೌನ್‌ ಮಾಡಿದರೂ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವುದು ಕೇಂದ್ರ ಸರ್ಕಾರಕ್ಕೆ ತಲೆ ನೋವಾಗಿದೆ. ಹೇಗಾದರೂ ಮಾಡಿ ಕೊರೊನಾ ವೈರಸ್‌ ಅನ್ನು ದೇಶದಿಂದ ಕೊನೆಗಾಣಿಸಬೇಕು ಎಂದು ಪಣತೊಟ್ಟಿರುವ ಮೋದಿ ಸರ್ಕಾರ ಎರಡನೇ ಹಂತದಲ್ಲಿ 19 ದಿನಗಳು ಕಾಲ ಲಾಕ್‌ಡೌನ್‌ ವಿಸ್ತರಣೆ ಮಾಡಿದೆ.

2ನೇ ಹಂತದ ಲಾಕ್‌ಡೌನ್‌ ನಿರ್ಣಾಯಕ ಘಟ್ಟವಾಗಿರುವುದರಿಂದ ನಾಗರಿಕರು ಕಠಿಣ ನಿಯಮಗಳನ್ನು ಪಾಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೊರೊನಾ ವೈರಸ್‌ ಸೋಂಕಿನ ಹಾಟ್‌ಸ್ಪಾಟ್‌ ಸ್ಥಳಗಳಲ್ಲಿ ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ಹೇಳಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದಿದ್ದರೆ ಹಾಗೂ ಉಗುಳಿದರೆ ಎರಡು ವರ್ಷ ಜೈಲು ಅಥವಾ ದಂಡ ಕಟ್ಟಬೇಕಾಗುತ್ತದೆ ಎಂದು ಸರ್ಕಾರ ಹೇಳಿದೆ.

ಮಾರ್ಗಸೂಚಿಗಳು...

*ಮನೆಯಿಂದ ಹೊರ ಹೋಗುವ ಅಗತ್ಯವಿದ್ದಾಗ ಕಡ್ಡಾಯ ಮಾಸ್ಕ್‌ ಧರಿಸಬೇಕು.
* ರಸ್ತೆಗಳಲ್ಲಿ ಅನಾವಶ್ಯಕವಾಗಿ ನಡೆದಾಡುವುದು ಹಾಗೂ ವಾಹನಗಳಲ್ಲಿ ಸುತ್ತಾಡಬಾರದು.
* ಮನೆಯಿಂದ ಹೊರ ಬಂದು ಉಗುಳುವುದು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು
* ಸಾರ್ವಜನಿಕ ಸ್ಥಳಗಳಲ್ಲಿ 5ಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ
* ದಿನಸಿ, ತರಕಾರಿ, ಹಣ್ಣು ಖರೀದಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು

ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದರೆ ಜೈಲು ಶಿಕ್ಷೆ ಅಥವಾ ದಂಡ ಕಟ್ಟಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT