ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸ್ತ್ರೀಯ ಸಂಗೀತ ಸಾಮ್ರಾಟ ಉಸ್ತಾದ್‌ ಇಮ್ರತ್‌ ಖಾನ್‌ ನಿಧನ

Last Updated 23 ನವೆಂಬರ್ 2018, 11:49 IST
ಅಕ್ಷರ ಗಾತ್ರ

ನವದೆಹಲಿ: ಶಾಸ್ತ್ರೀಯ ಸಂಗೀತ ಸಾಮ್ರಾಟ ಉಸ್ತಾದ್‌ ಇಮ್ರತ್‌ ಖಾನ್‌ (83)ಅಮೆರಿಕದಲ್ಲಿ ನಿಧನರಾದರು.

ನ್ಯೂಮೋಮಿಯಾದಿಂದ ಬಳಲುತ್ತಿದ್ದ ಅವರನ್ನು ವಾರದ ಹಿಂದೆ ಸೇಂಟ್‌ ಲೂಯಿಸ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಗುರುವಾರ ಮೃತಪಟ್ಟಿದ್ದಾರೆ ಎಂದು ಪುತ್ರ ನಿಶಾತ್‌ ಖಾನ್‌ ತಿಳಿಸಿದ್ದಾರೆ.

ಶನಿವಾರ ಅಂತ್ಯಸಂಸ್ಕಾರ ನಡೆಯಲಿದೆ ಎಂದೂ ತಿಳಿಸಿದ್ದಾರೆ. ಎರಡು ದಶಕಗಳಿಂದ ಇಮ್ರತ್‌ ಅವರು ಸೇಂಟ್‌ ಲೂಯಿಸ್‌ನಲ್ಲೇ ನೆಲೆಸಿದ್ದಾರೆ.

ಸುರ್‌ಬಹಾರ್‌ ಮತ್ತು ಸಿತಾರ್‌ ವಾದನದ ಮೂಲಕ ಇಮ್ರತ್‌ ಅವರು ಜಗತ್ಪ್ರಸಿದ್ಧರಾಗಿದ್ದರು. ವಿಶ್ವದಾದ್ಯಂತ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದ ಅವರು, ಭಾರತದಲ್ಲಿ ನಡೆದ ವಿವಿಧ ಸಂಗಿತೋತ್ಸವಗಳಲ್ಲೂ ಪಾಲ್ಗೊಂಡಿದ್ದರು. ಖ್ಯಾತ ಸಿತಾರ್‌ ವಾದಕ ವಿಲಾಯತ್‌ ಖಾನ್‌ ಇವರ ಹಿರಿಯ ಸಹೋದರರಾಗಿದ್ದಾರೆ.

ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿಯನ್ನು ನಿರಾಕರಿಸುವ ಮೂಲಕ ಇಮ್ರತ್‌ ಅವರು ಗಮನ ಸೆಳೆದಿದ್ದರು. ‘ನನ್ನ ಸಾಧನೆಯನ್ನು ಬಹಳ ತಡವಾಗಿ ಗುರುತಿಸಲಾಗಿದೆ’ ಎಂದೂ ಅದಕ್ಕೆ ಕಾರಣ ನೀಡಿದ್ದರು.

‘ತಂದೆಯವರು ಭಾರತೀಯ ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಸರ್ಕಾರ ಗುರುತಿಸಿಲ್ಲ’ ಎಂದು ನಿಶಾತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT