4ನೇ ಹಂತದ ಮತದಾನಕ್ಕೆ ಅಧಿಸೂಚನೆ

ಬುಧವಾರ, ಏಪ್ರಿಲ್ 24, 2019
32 °C

4ನೇ ಹಂತದ ಮತದಾನಕ್ಕೆ ಅಧಿಸೂಚನೆ

Published:
Updated:

ನವದೆಹಲಿ: ಲೋಕಸಭಾ ಚುನಾವಣೆಯ 4ನೇ ಹಂತದ ಮತದಾನಕ್ಕೆ ಆಯೋಗ ಅಧಿಸೂಚನೆ ಹೊರಡಿಸಿದೆ. ಏ. 29ರಂದು ಒಂಬತ್ತು ರಾಜ್ಯಗಳ 71 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಏ. 9 ಕೊನೆಯ ದಿನ. 

ಬಿಹಾರದ ಐದು, ಜಾರ್ಖಂಡ್‌ನ ಮೂರು, ಮಧ್ಯಪ್ರದೇಶದ ಆರು, ಮಹಾರಾಷ್ಟ್ರದ 17, ಒಡಿಶಾದ ಆರು, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ತಲಾ 13 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಿಗೆ ಮತದಾನ ನಿಗದಿ ಆಗಿದೆ.

ಬಿಹಾರದ ದರ್ಭಾಂಗ್, ಬೇಗುಸರಾಯ್, ರಾಜಸ್ಥಾನದ ಟೊಂಕ್–ಸವಾಯ್ ಮಾಧೋಂಪುರ, ಅಜ್ಮೀರ್, ಜೋಧಪುರ, ಬಾರ್ಮೇರ್, ಉತ್ತರ ಪ್ರದೇಶದ ಹರ್ದೋಯ್, ಉನ್ನಾವ್, ಇಟಾವಾ, ಕಾನ್ಪುರ, ಹಮೀರ್‌ಪುರ ಮತದಾನ ನಡೆಯ ಲಿರುವ ಕೆಲವು ಪ್ರಮುಖ ಕ್ಷೇತ್ರಗಳಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !