ಗುರುವಾರ , ಮಾರ್ಚ್ 4, 2021
18 °C

ಆರ್‌ಬಿಐ ಕಾಯ್ದೆಗೆ ತಿದ್ದುಪಡಿ: ಹರಿದ ₹200, ₹2000 ನೋಟಿನ ಬದಲಾವಣೆ ಇನ್ನು ಸಾಧ್ಯ

ಏಜೆನ್ಸಿ ಸುದ್ದಿ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: ಹೊಸದಾಗಿ ಪರಿಚಯಿಸಿದ್ದ ₹200, ₹2,000 ಮುಖಬೆಲೆಯ ನೋಟು ಹರಿದಿದ್ದರೆ, ಬಣ್ಣಗೆಟ್ಟಿದ್ದರೆ, ಕೊಳಕಾಗಿದ್ದರೆ, ಶಾಯಿಯ ಕಲೆ ಇರುವ ನೋಟುಗಳನ್ನು ಇನ್ನು ಮುಂದೆ ಸುಲಭವಾಗಿ ಬದಲಾಯಿಸಬಹುದು. 

ಭಾರತೀಯ ರಿಸರ್ವ್‌ ಬ್ಯಾಂಕ್‌ (ನೋಟು ವಿನಿಮಯ) ಕಾಯ್ದೆ 2009ಕ್ಕೆ ತಿದ್ದುಪಡಿ ತಂದಿದ್ದು, ಇನ್ನು ಮುಂದೆ ಎಲ್ಲಾ ಬ್ಯಾಂಕ್‌ಗಳಲ್ಲಿ, ಆರ್‌ಬಿಐ ಕಚೇರಿಗಳಲ್ಲಿ ನೋಟು ಬದಲಾವಣೆ ಸಾಧ್ಯವಾಗಲಿದೆ. ತಿದ್ದುಪಡಿ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ ಎಂದು ಆರ್‌ಬಿಐ ತಿಳಿಸಿದೆ.

₹5, ₹10, ₹20, ₹50, ₹100, ₹500 ಮತ್ತು ₹1,000ರ ಮುಖಬೆಲೆಯ ನೋಟುಗಳು ಹಾಳಾಗಿದ್ದರೆ ಬದಲಾಯಿಸಿಕೊಡುವುದಕ್ಕೆ ಕಾನೂನು ಇತ್ತು. ಆದರೆ, ನೋಟು ರದ್ದತಿಯ ಬಳಿಕ ಚಲಾವಣೆಗೆ ತರಲಾದ ಹೊಸ ಮುಖಬೆಲೆಯ ನೋಟುಗಳ ಪ್ರಸ್ತಾವ ಕಾನೂನಿನಲ್ಲಿ ಇರಲಿಲ್ಲ  ಆರಂಭಿಸಿವೆ. 

ಹೊಸ ಮುಖಬೆಲೆಯ ನೋಟುಗಳು ಬಣ್ಣ ಕಳೆದುಕೊಳ್ಳುತ್ತಿವೆ ಎಂಬ ದೂರುಗಳು ಕೇಳಿ ಬಂದಿದ್ದವು. ಇಂತಹ ನೋಟು ಬದಲಾಯಿಸಿಕೊಡುವಂತೆ ಬ್ಯಾಂಕುಗಳಿಗೆ ಆರ್‌ಬಿಐ ಸೂಚನೆ ಕೊಟ್ಟಿತ್ತು. ಆದರೆ, ಹೀಗೆ ಬದಲಾಯಿಸಿ ಕೊಡುವುದಕ್ಕೆ ಕಾಯ್ದೆಯ ಬೆಂಬಲ ಇಲ್ಲದಿದ್ದುದರಿಂದ ವಿನಿಮಯಕ್ಕೆ ಬ್ಯಾಂಕುಗಳು ಮನಸ್ಸು ಮಾಡುತ್ತಿಲ್ಲ.

ಹಾಳಾದ ನೋಟಿನ ವ್ಯಾಖ್ಯಾನ: ಸಾಮಾನ್ಯ ಬಳಕೆಯಿಂದಾಗಿ ಜೀರ್ಣಗೊಂಡ ನೋಟುಗಳನ್ನು ಹಾಳಾದ ನೋಟುಗಳು ಎಂದು ಪರಿಗಣಿಸಲಾಗುತ್ತದೆ. ಎರಡು ತುಂಡಾಗಿ ಅಂಟಿಸಲಾದ ನೋಟುಗಳೂ ಈ ವ್ಯಾಪ್ತಿಗೆ ಬರುತ್ತವೆ. ಆದರೆ ಎರಡೂ ತುಂಡುಗಳು ಒಂದೇ ನೋಟಿನದ್ದಾಗಿರಬೇಕು. ಯಾವುದೇ ಅಗತ್ಯ ಅಂಶಗಳು ನಾಶವಾಗಿ ಹೋಗಿರಬಾರದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು