ಶಿಕ್ಷಣ ಕ್ಷೇತ್ರದಲ್ಲಿ ‘ಎನ್‌ಪಿಎ’ ಹೆಚ್ಚಳ

7

ಶಿಕ್ಷಣ ಕ್ಷೇತ್ರದಲ್ಲಿ ‘ಎನ್‌ಪಿಎ’ ಹೆಚ್ಚಳ

Published:
Updated:

ನವದೆಹಲಿ: ಶಿಕ್ಷಣ ಕ್ಷೇತ್ರದಲ್ಲಿ ಮಂಜೂರಾದ ಸಾಲದಲ್ಲಿನ ಮರುಪಾವತಿ ಆಗದಿರುವ ಪ್ರಮಾಣವು (ಎನ್‌ಪಿಎ) ಮೂರು ವರ್ಷಗಳಿಂದ ಏರುಗತಿಯಲ್ಲಿ ಇದೆ.

2018ರ ಮಾರ್ಚ್‌ ಅಂತ್ಯದ ಹೊತ್ತಿಗೆ ‘ಎನ್‌ಪಿಎ’ ಪ್ರಮಾಣ ಶೇ 9ರಷ್ಟಕ್ಕೆ ತಲುಪಿದೆ. ಸಾಲ ಮಂಜೂರಾತಿಯಲ್ಲಿ ಬ್ಯಾಂಕ್‌ಗಳು, ಭಾರತದ ಬ್ಯಾಂಕ್‌ಗಳ ಸಂಘದ (ಐಬಿಎ) ‘ಮಾದರಿ ಶಿಕ್ಷಣ ಸಾಲ ಯೋಜನೆ’ ಅನುಸರಿಸುತ್ತಿವೆ. ಈ ಯೋಜನೆಯಡಿ ಮರುಪಾವತಿ ಅವಧಿ ಗರಿಷ್ಠ 15ವರ್ಷಗಳವರೆಗೆ ಇದೆ.

ಶಿಕ್ಷಣ ಪೂರ್ಣಗೊಂಡ ನಂತರ ಸಾಲ ಮರುಪಾವತಿ ಆರಂಭಿಸಲು ಒಂದು ವರ್ಷದ ವಿನಾಯ್ತಿ ಸೌಲಭ್ಯ ಜಾರಿಯಲ್ಲಿ ಇದೆ. ಸಾಲ ಮರು ಪಾವತಿ ಅವಧಿಯಲ್ಲಿ ನಿರುದ್ಯೋಗ ಮತ್ತು ಸಾಕಷ್ಟು ವೇತನ ಸಿಗದ ಕಾರಣಕ್ಕೆ ಎರಡರಿಂದ ಮೂರು ಬಾರಿ  ಮರುಪಾವತಿ ಮುಂದೂಡಲೂ ಅವಕಾಶ ಇದೆ.

 ವಿದ್ಯಾಲಕ್ಷ್ಮಿ ಅಂತರ್ಜಾಲ ತಾಣ: ವಿದ್ಯಾರ್ಥಿಗಳು ಶಿಕ್ಷಣ ಸಾಲವನ್ನು ಸುಲಭವಾಗಿ ಪಡೆಯುವುದಕ್ಕೆ ನೆರವಾಗಲು,  ವಿದ್ಯಾಲಕ್ಷ್ಮಿ (www.vidyalakshmi.co.in) ಅಂತರ್ಜಾಲ ತಾಣ ಆರಂಭಿಸಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !