ಕಾಸ್ಮೊಸ್‌ ಬ್ಯಾಂಕ್‌ಗೆ ವಂಚನೆ

7

ಕಾಸ್ಮೊಸ್‌ ಬ್ಯಾಂಕ್‌ಗೆ ವಂಚನೆ

Published:
Updated:

ನವದೆಹಲಿ: ಪುಣೆಯ ಕಾಸ್ಮೊಸ್‌ ಬ್ಯಾಂಕ್‌ನಲ್ಲಿ ನಡೆದಿರುವ ₹ 90 ಕೋಟಿಗಳ ವಂಚನೆಗೆ ಬ್ಯಾಂಕ್‌ನ ಐ.ಟಿ ವ್ಯವಸ್ಥೆ ಮೇಲೆ ನಡೆದ ಸೈಬರ್‌ ದಾಳಿಯೇ ಕಾರಣ ಎಂದು ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ) ಹೇಳಿದೆ.

ತನ್ನ ವ್ಯವಸ್ಥೆ ಸಂಪೂರ್ಣ ಸುರಕ್ಷಿತವಾಗಿದೆ. ಬ್ಯಾಂಕ್‌ಗೆ ಸಂಬಂಧಿಸಿದ ಐ.ಟಿ ಸೌಲಭ್ಯದ ವ್ಯಾಪ್ತಿ ಒಳಗೆ ಈ ವಂಚನೆ ಎಸಗಲಾಗಿದೆ. ವಂಚನೆಯ ಕಾರಣ ಪತ್ತೆ ಹಚ್ಚಲು ಬ್ಯಾಂಕ್‌ಗೆ ಸಂಪೂರ್ಣ ನೆರವು ನೀಡಲಾಗುವುದು ಎಂದು ‘ಎನ್‌ಪಿಸಿಐ’ ತಿಳಿಸಿದೆ.

ಬ್ಯಾಂಕ್‌ನ ಸರ್ವರ್‌ ಮೇಲೆ ಕುತಂತ್ರಾಂಶದ ನೆರವಿನಿಂದ ಸೈಬರ್‌ ದಾಳಿ ನಡೆಸಿರುವ ಮಾಹಿತಿಗಳ್ಳರು, ಸಾವಿರಾರು ನಕಲಿ ಡೆಬಿಟ್‌ ಕಾರ್ಡ್‌ಗಳ ಮೂಲಕ ಎರಡು ದಿನಗಳಲ್ಲಿ ಈ ವಂಚನೆ ಎಸಗಿದ್ದಾರೆ ಎಂದು ಬ್ಯಾಂಕ್‌ನ ಅಧ್ಯಕ್ಷ ಮಿಲಿಂದ್‌ ಕಾಳೆ ಹೇಳಿದ್ದಾರೆ.

ಕೆನಡಾದಿಂದ ಈ ಸೈಬರ್‌ ದಾಳಿ ನಡೆಸಲಾಗಿದೆ. ಕೆನಡಾ, ಹಾಂಕಾಂಗ್‌ ಮತ್ತು ಭಾರತ ಸೇರಿದಂತೆ 28 ದೇಶಗಳಲ್ಲಿನ ಎಟಿಎಂಗಳಿಂದ ₹ 78 ಕೋಟಿ ಹಣ ಪಡೆಯಲಾಗಿದೆ. ಹಾಂಕಾಂಗ್ ಬ್ಯಾಂಕ್‌ ಮೂಲಕ ನಡೆಸಿದ ವಂಚನೆ ವಹಿವಾಟಿನಿಂದ ಬ್ಯಾಂಕ್‌ಗೆ ₹ 13.92 ಕೋಟಿಗಳ ನಷ್ಟವಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !