ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಆರ್‌ಸಿ ಪಟ್ಟಿಯಲ್ಲಿ ಇಲ್ಲದವರು ಮತದಾನ ಮಾಡಬಹುದು: ಚುನಾವಣಾ ಆಯೋಗ 

Last Updated 27 ಸೆಪ್ಟೆಂಬರ್ 2019, 5:08 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಪೌರತ್ವನೋಂದಣಿ (ಎನ್‌ಆರ್‌ಸಿ)ಯಲ್ಲಿ ಇಲ್ಲದೇ ಇರುವ ವ್ಯಕ್ತಿಗಳನ್ನು ಸಂದೇಹಾಸ್ಪದ ಎಂಬುದಾಗಿ ಗುರುತಿಸಬಾರದು ಎಂದು ಚುನಾವಣಾ ಆಯೋಗ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಅಸ್ಸಾಂನಲ್ಲಿ ಕೆಲವು ಪೌರರ ಪೌರತ್ವ ಅನಿಶ್ಚಿತ ಅಥವಾ ವಿವಾದದಲ್ಲಿದೆ. ಹೀಗಿರುವವರನ್ನು ಸಂದೇಹಾಸ್ಪದ (Doubtful- ‘D’ voters) ಮತದಾರರಕೆಟಗರಿಗೆ ಸೇರಿಸಲಾಗಿದೆ.1997ರಲ್ಲಿ ಚುನಾವಣಾ ಆಯೋಗವು ಅಸ್ಸಾಂ ರಾಜ್ಯದ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿದಾಗ ಈ ಹೊಸ ಕೆಟಗರಿಯನ್ನು ರಚಿಸಿತ್ತು.

ಡಿ ವೋಟರ್‌ಗಳ ಹೆಸರು ಅಸ್ಸಾಂ ಮತದಾರರ ಪಟ್ಟಿಯಲ್ಲಿ ಇದ್ದರೂ ವಿದೇಶಿನ್ಯಾಯಮಂಡಳಿಯಿಂದ ತೀರ್ಪು ಬರದೆ ಅವರು ಚುನಾವಣೆಯಲ್ಲಿ ಮತದಾನ ಮಾಡುವಂತಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ 1.2 ಲಕ್ಷ ಡಿ ವೋಟರ್‌ಗಳು ಮತದಾನ ಮಾಡಿಲ್ಲ. ಆದಾಗ್ಯೂ, ಎನ್‌ಆರ್‌ಸಿ ಕರಡು ಪಟ್ಟಿಯಿಂದ ಹೊರಗುಳಿದವರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿತ್ತು.

ಎನ್‌ಆರ್‌ಸಿ ಅಂತಿಮ ಪಟ್ಟಿ ಆಗಸ್ಟ್ 30ರಂದು ಪ್ರಕಟವಾಗಿದ್ದು ಅದರಲ್ಲಿ 3.11 ಕೋಟಿ ಅರ್ಜಿದಾರರನ್ನು ಪೌರರಾಗಿ ಸೇರ್ಪಡೆ ಮಾಡಿತ್ತು. ಅದೇ ವೇಳೆ19 ಲಕ್ಷ ಮಂದಿಯನ್ನು ಕೈ ಬಿಡಲಾಗಿತ್ತು.

ಪಟ್ಟಿ ಪ್ರಕಟವಾದ ನಂತರಈ ಪಟ್ಟಿಯಲ್ಲಿ ಇಲ್ಲದವರ ಪೌರತ್ವ ಸಂದೇಹಾಸ್ಪದ ಎಂದು ಗುರುತಿಸಲಾಗುತ್ತದೆಯೇ? ವಿದೇಶಿ ನ್ಯಾಯಾಮಂಡಳಿ ಪೌರತ್ವ ಬಗ್ಗೆ ತೀರ್ಪು ನೀಡುವವರೆಗೆ ಆ ವ್ಯಕ್ತಿಗಳ ಪೌರತ್ವ ಸಂದೇಹಾಸ್ಪದ ಎಂದು ಗುರುತಿಸಲಾಗುತ್ತದೆಯೇ? ಎಂಬ ಪ್ರಶ್ನೆಯನ್ನು ಚುನಾವಣಾ ಆಯೋಗ ಎದುರಿಸಬೇಕಾಗಿ ಬಂದಿತ್ತು.

19 ಲಕ್ಷ ಮಂದಿಯ ಪೈಕಿ ಎಷ್ಟು ಜನರು ಅಸ್ಸಾಂ ಮತದಾರರ ಪಟ್ಟಿಯಲ್ಲಿ ನೋಂದಣಿಯಾದವರು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ಎನ್‌ಆರ್‌ಸಿ ಅಂತಿಮ ಪಟ್ಟಿಯನ್ನು ಆಧರಿಸಿರುವ ಮತದಾರರ ಪಟ್ಟಿಯಲ್ಲಿ ತಾನಾಗಿಯೇ ಡಿಲೀಟ್ ಮಾಡುವ ಆಯ್ಕೆ ಇಲ್ಲ. ಅದೇ ವೇಳೆ ಪಟ್ಟಿಯಲ್ಲಿ ಇಲ್ಲದವರನ್ನು ಡಿ ವೋಟರ್ ಎಂದು ಗುರುತಿಸಬಾರದು ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಎನ್ಆರ್‌ಸಿ ಪಟ್ಟಿಯಲ್ಲಿ ವ್ಯಕ್ತಿಗಳ ಹೆಸರು ಇಲ್ಲದೇ ಇದ್ದರೆ ಅವರನ್ನು ವಿದೇಶೀಯರು (ಅಕ್ರಮ ವಲಸೆಗಾರರು) ಎಂದು ಹೇಳುವಂತಿಲ್ಲ ಎಂದು ಆಗಸ್ಟ್ 20ರಂದು ಗೃಹ ಸಚಿವಾಲಯ ಸ್ಪಷ್ಟನೆ ನೀಡಿತ್ತು.

ಇದನ್ನೂ ಓದಿ:ಅಸ್ಸಾಂ-ಎನ್‌ಆರ್‌ಸಿ ಅಂತಿಮ ಪಟ್ಟಿಯಲ್ಲಿ ಇಲ್ಲದಿದ್ದವರನ್ನು ಬಂಧಿಸುವುದಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT