ಗುರುವಾರ , ನವೆಂಬರ್ 14, 2019
19 °C
ಎನ್‌ಆರ್‌ಸಿ ಪಟ್ಟಿಯಲ್ಲಿ ಹೆಸರು ನಾಪತ್ತೆ

‘ಎನ್‌ಆರ್‌ಸಿ: ಬಲವಂತದ ಕ್ರಮ ಬೇಡ’

Published:
Updated:

ನವದೆಹಲಿ: ಅಸ್ಸಾಂ ರಾಷ್ಟ್ರೀಯ ಪೌರತ್ವ ಪಟ್ಟಿಯಲ್ಲಿ (ಎನ್‌ಆರ್‌ಸಿ) ಹೆಸರು ಇಲ್ಲದವರ ವಿರುದ್ಧ ಬಲವಂತವಾಗಿ ಕ್ರಮಕೈಗೊಳ್ಳದಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.

ಎನ್‌ಆರ್‌ಸಿ ಬಿಡುಗಡೆ ಮಾಡಿರುವುದು ಕೇವಲ ಪರಿಷ್ಕೃತ ಕರಡು ಪಟ್ಟಿಯಾದ ಕಾರಣ ಹೆಸರು ಸೇರಿಸಲು ಜನರಿಗೆ ಮುಕ್ತ ಮತ್ತು ನ್ಯಾಯಯುತವಾದ ಅವಕಾಶ ನೀಡುವಂತೆ ಸಲಹೆ ಮಾಡಿದೆ.

ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 40 ಲಕ್ಷಕ್ಕೂ ಹೆಚ್ಚು ನಾಗರಿಕರ ಹೆಸರು ನಾಪತ್ತೆಯಾಗಿದ್ದು, ಇದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಸುಪ್ರೀಂ ಕೋರ್ಟ್ ಮೇಲುಸ್ತುವಾರಿಯಲ್ಲಿ ಕೇಂದ್ರ ಸರ್ಕಾರ ಅಸ್ಸಾಂನಲ್ಲಿ ಜನಗಣತಿ ನಡೆಸಿತ್ತು.

ಪ್ರತಿಕ್ರಿಯಿಸಿ (+)