ಭಾನುವಾರ, ಆಗಸ್ಟ್ 18, 2019
26 °C

ಭದ್ರತಾ ಕ್ರಮ: ಇನ್ನೂ ಕೆಲ ದಿನ ಜಮ್ಮು–ಕಾಶ್ಮೀರದಲ್ಲೇ ಇರಲಿದ್ದಾರೆ ಅಜಿತ್ ಡೊಭಾಲ್

Published:
Updated:

ನವದೆಹಲಿ: ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ನಿಗಾ ಇರಿಸುವ ಸಲುವಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್ಎ) ಅಜಿತ್ ಡೊಭಾಲ್ ಅವರು ಇನ್ನೂ ಕೆಲವು ದಿನ ಜಮ್ಮು–ಕಾಶ್ಮೀರದಲ್ಲಿ ಉಳಿಯಲಿದ್ದಾರೆ.

ರಾಜ್ಯದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸಲು ಅವರು ಆಗಸ್ಟ್‌ 5ರಂದು ಶ್ರೀನಗರಕ್ಕೆ ತೆರಳಿದ್ದರು. ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ವಿಶೇಷ ಸ್ಥಾನಮಾನ ರದ್ದು ನಿರ್ಧಾರವನ್ನು ರಾಜ್ಯಸಭೆಯಲ್ಲಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಡೊಭಾಲ್ ಅವರು ಶ್ರೀನಗರ ತಲುಪಿದ್ದರು. ನಂತರ ಈವರೆಗೆ ಕಾಶ್ಮೀರದ ಹಲವು ಪ್ರದೇಶಗಳಿಗೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಗ್ರಪೀಡಿತ ದಕ್ಷಿಣ ಕಾಶ್ಮೀರದ ಶೋಪಿಯಾನ್‌ಗೂ ಅವರು ಭೇಟಿ ನೀಡಿದ್ದರು.

ಇದನ್ನೂ ಓದಿ: ಹಿಂದೂ ಬಾಹುಳ್ಯ ರಾಜ್ಯವಾಗಿದ್ದರೆ 370ನೇ ವಿಧಿ ರದ್ದಾಗುತ್ತಿರಲಿಲ್ಲ: ಚಿದಂಬರಂ

ಭದ್ರತಾ ಅಧಿಕಾರಿಗಳನ್ನು ಅವಲಂಬಿಸುವ ಬದಲು ಖುದ್ದು ಸ್ಥಳದಲ್ಲಿದ್ದು ಪರಿಸ್ಥಿತಿ ನಿಭಾಯಿಸುವುದು ಡೊಭಾಲ್ ಉದ್ದೇಶ ಎಂದು ಮೂಲಗಳನ್ನು ಉಲ್ಲೇಖಿಸಿ ದಿ ಪ್ರಿಂಟ್ ವರದಿ ಮಾಡಿದೆ.

ಭಾನುವಾರ ದೆಹಲಿಗೆ ಬಂದಿದ್ದ ಅವರು ಕೆಲವೇ ಗಂಟೆಗಳಲ್ಲಿ ಮತ್ತೆ ಜಮ್ಮು–ಕಾಶ್ಮೀರಕ್ಕೆ ತೆರಳಿದ್ದರು.

ಇದನ್ನೂ ಓದಿ: ತೀವ್ರ ನಿರ್ಬಂಧ ಹಿನ್ನೆಲೆ: ಕಾಶ್ಮೀರದಲ್ಲಿ ಮಂಕಾದ ಈದ್ ಆಚರಣೆ​

Post Comments (+)