ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು ಪುರಭವನಕ್ಕೆ ನವೀಕರಣ ಯೋಗ

Last Updated 9 ಫೆಬ್ರುವರಿ 2018, 6:35 IST
ಅಕ್ಷರ ಗಾತ್ರ

ಪುತ್ತೂರು: ಸಾಂಸ್ಕೃತಿಕ ನಗರಿಯಾದ ಪುತ್ತೂರಿನಲ್ಲಿ ಮೂಲ ಸೌಲಭ್ಯಗಳಿಲ್ಲದೆ ಸೊರಗುತ್ತಿದ್ದ ಪುರಭವನವನ್ನು ಅಭಿವೃದ್ಧಿ ಪಡಿಸಲು ಪುತ್ತೂರು ನಗರಸಭೆ ಕೊನೆಗೂ ಮುಂದಾಗಿದ್ದು, ಪುರಭವನವನ್ನು ದುರಸ್ತಿಗೊಳಿಸಿ ನವೀಕರಿಸುವ ಕಾಮಗಾರಿಗೆ ಗುರುವಾರ ಸಂಜೆ ಶಂಕುಸ್ಥಾಪನೆ ಮಾಡಲಾಗಿದೆ. ಇದರಿಂದಾಗಿ ಇಲ್ಲಿನ ಮಂದಿಯ ಬಹುದಿನಗಳ ಬೇಡಿಕೆಯೊಂದು ಈಡೇರುವ ಹಂತಕ್ಕೆ ತಲುಪಿದೆ.

ಪುತ್ತೂರು ನಗರದಲ್ಲಿ ಮುಖ್ಯವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಜನಸಾಮಾನ್ಯರಿಗೆ ಅನುಕೂಲವಾಗಬೇಕೆಂಬ ದೃಷ್ಟಿಯಿಂದ ರೋಟರಿ ಸಂಸ್ಥೆಯವರು 30 ವರ್ಷಗಳ ಹಿಂದೆ ಪುರಭವನವನ್ನು ನಿರ್ಮಿಸಿ ಕೊಡುಗೆಯಾಗಿ ನೀಡಿದ್ದರು. ಆದರೆ ಮೂಲ ಸೌಕರ್ಯಗಳಿಲ್ಲದ ಕಾರಣ ಕಾರ್ಯಕ್ರಮ ನಡೆಸುವವರು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿತ್ತು, ಈ ನಡುವೆ ಹಿಂದಿನ ಪುರಸಭೆಯಿಂದ ಸಣ್ಣ ಪ್ರಮಾಣದ ದುರಸ್ತಿ ಕೆಲಸ ನಡೆದಿದ್ದರೂ ಪ್ರಮುಖವಾಗಿ ಆಸನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ಕೆಲವೊಂದು ಸೌಲಭ್ಯಗಳ ಕೊರತೆ ಕಾಡತೊಡಗಿತ್ತು.

ಸಾಂಸ್ಕೃತಿಕ ಕೇಂದ್ರವಾಗಬೇಕಿದ್ದ ಹಾಗೂ ವಿವಾಹ ಕಾರ್ಯಕ್ರಮಗಳು ನಡೆಯಬೇಕಾಗಿದ್ದ ಪುರಭವನದಲ್ಲಿ ಚಟುವಟಿಕೆಗಳು ಕ್ಷೀಣಿಸತೊಡಗಿದ ಮೇಲೆ ಹಾಗೂ ಪುತ್ತೂರು ಪುರಭವನ ಡೊಡ್ಡಿಯಂತಿದೆ ಎಂಬ ಅಪವಾದಗಳು ಕೇಳಿಬರಲಾರಂಭಿಸಿದವು. ಈಗಿನ ನಗರಸಭಾ ಆಡಳಿತದ ಎಲ್ಲ ಸದಸ್ಯರು ತೀರ್ಮಾನ ಕೈಗೊಂಡು ಪುರಭವನಕ್ಕೆ ಕಾಯಕಲ್ಪ ನೀಡಲು ಮುಂದಾಗಿದ್ದಾರೆ. ಇದರಿಂದಾಗಿ ಮುಂದೆ ಪುರಭವನ ಭವ್ಯ ರೂಪ ತಳೆಯಲಿದೆ.

‘ಪುರಸಭೆ ನವೀಕರಣಕ್ಕೆ ಬಹಳಷ್ಟು ಬೇಡಿಕೆಯಿದ್ದರೂ ಅನುದಾನದ ಕೊರತೆಯಿಂದಾಗಿ ಈ ತನಕ ಪುರಭವನವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಪುರಭವನದ ಅಭಿವೃದ್ಧಿಪಡಿಸಲಾಗುವುದು’ ಎನ್ನುತ್ತಾರೆ ನಗರಸಭೆಯ ಆಡಳಿತ ಪಕ್ಷದ ಹಿರಿಯ ಸದಸ್ಯ ಎಚ್.ಮಹಮ್ಮದ್ ಆಲಿ.

ಶಶಿಧರ ರೈ ಕುತ್ಯಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT