ಒಡಿಶಾ: ಮಹಾನದಿ ಸೇತುವೆಯಿಂದ ಉರುಳಿದ ಬಸ್; 7 ಮಂದಿ ಸಾವು

ಕಟಕ್: ಕಟಕ್ ಕಡೆಗೆ ತೆರಳುತ್ತಿದ್ದ ಬಸ್ ಸೇತುವೆಯಿಂದ ಉರುಳಿ ’ಮಹಾನದಿ’ ನದಿಯ ದಡಕ್ಕೆ ಬಿದ್ದಿದ್ದು, ಕನಿಷ್ಠ ಏಳು ಮಂದಿ ಸಾವಿಗೀಡಾಗಿದ್ದಾರೆ.
ತಾಲಚೇರ್ ಕಡೆಯಿಂದ ಕಟಕ್ಗೆ ಸಂಚರಿಸುತ್ತಿದ್ದ ಬಸ್ ಜಗತ್ಪುರ್ ಸಮೀಪದ ಮಹಾನದಿ ಸೇತುವೆಯಿಂದ 30 ಅಡಿ ಕೆಳಗೆ ಬಸ್ ಉರುಳಿದೆ. ಮೂವತ್ತು ಜನರು ಪ್ರಯಾಣಿಸುತ್ತಿದ್ದ ಬಸ್, ಸೇತುವೆ ಮೇಲೆ ಕೋಣವೊಂದಕ್ಕೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿ ಬಸ್ ಸೇತುವೆಯಿಂದ ಬಿದ್ದಿರಬಹುದು ಎಂದು ಅಂದಾಜಿಸಲಾಗುತ್ತಿದೆ.
Odisha: 7 people died after a bus carrying around 30 passengers fell from the Mahanadi bridge near Jagatpur in Cuttack today. Rescue operations underway; Latest #visuals from the spot pic.twitter.com/5V1Ow2zFww
— ANI (@ANI) November 20, 2018
ಬಸ್ ನದಿ ತೀರದಲ್ಲಿ ಉರುಳಿರುವುದರಿಂದ ರಕ್ಷಣಾ ಕಾರ್ಯಾಚರಣೆಗಾಗಿ ದೋಣಿಗಳನ್ನು ನಿಯೋಜಿಸಲಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ದುರ್ಘಟನೆ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.
ಏಳು ಮಂದಿ ಮೃತ ಪಟ್ಟಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಒಡಿಶಾ ಡಿಜಿಪಿ ಆರ್.ಪಿ.ಶರ್ಮಾ ಟ್ವೀಟ್ ಮಾಡಿದ್ದಾರೆ.
I am extremely saddened to know about seven deaths...RIP...most of the other injured have been shifted to the hospital and are receiving treatment....wish them a speedy recovery....
— Dr. Rajendra Sharma. (@DrRajendraShar2) November 20, 2018
ಬರಹ ಇಷ್ಟವಾಯಿತೆ?
3
0
0
0
0
0 comments
View All